
ಹಾಸನ : ತಾಲ್ಲೂಕಿನ ದುದ್ದ ಹೋಬಳಿಯ ಹಾರನಹಳ್ಳಿ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮುಖ್ಯ ಕಾರ್ಯಕ್ರಮದ ಅಡಿಯಲ್ಲಿ ಮಣ್ಣು ಮಾದರಿ ಸಂಗ್ರಹದ ರೀತಿ ಹಾಗೂ ಮಣ್ಣಿನ ಪರೀಕ್ಷೆ ಮಹತ್ವದ ಕುರಿತು ರೈತರಿಗೆ ಕಾರ್ಯಕ್ರಮವನ್ನು 5 ನೇ ತಾರೀಕು ನಡೆಸಿದರು.
ಈ ಕಾರ್ಯಕ್ರಮದಲ್ಲಿ MCF ಕಂಪನಿಯ ಪ್ರಮುಖರು ಹಾಗು ನಮ್ಮ ಕಾಲೇಜಿನ ಮಣ್ಣಿನ ವಿಜ್ಞಾನದ ಸಹ ಪ್ರಾಧ್ಯಾಪಕರಾದ ಡಾ.ಅಶೋಕ್. ಎಲ್. ಬಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಚಿಕ್ಕರಾಜು ರವರು ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ರೈತರಿಗೆ ಜ್ಞಾನ ನೀಡಿದರು.
ಈ ಕಾರ್ಯಕ್ರಮದಲ್ಲಿ ನಮ್ಮ ತಂಡ ರೈತರಿಗೆ ಮಣ್ಣಿನ ಮಾದರಿ ತೆಗೆಯದ ಪದ್ಧತಿ ಪಾತ್ಯಕ್ಷಿಕೆ ಹಾಗೂ ಮಣ್ಣಿನ ಪರೀಕ್ಷೆಯನ್ನು ಮಾಡುವುದು ಎಷ್ಟು ಅವಶ್ಯ ಮತ್ತು ಅದರ ಲಾಭಗಳನ್ನು ರೈತರಿಗೆ ತಿಳಿ ಹೇಳಿದರು.
ಕಲಿಯವ ಹುಮ್ಮಸ್ಸಿನಿಂದ ರೈತರು ತಮ್ಮ ಸಮಯವನ್ನು ಹೂಡಿ ಕಾರ್ಯಕ್ರಮದ ಫಲಾನುಭವಿಗಳಾದರು.
