
ಆಲೂರು: ಹಾಸನ ಆಲೂರು ವಾಟೇವೊಳೆ ಬಿಕ್ಕೋಡು ಮಾರ್ಗವಾಗಿ ಸಂಚಾರಿಸುವ ಕೆ.ಎ-13 ಎಫ್-2033 ಸಂಖ್ಯೆಯ ಬಸ್ಸು ಬಿಕ್ಕೋಡು ಗ್ರಾಮದಿಂದ ಆಲೂರು ಪಟ್ಟಣದ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸುವ ಸಂದರ್ಭದಲ್ಲಿ ಬಸ್ಸಿನ ನಿರ್ವಾಹಕನು ಬಸ್ ಸ್ಟಾಂಡ್ ನ ಸಂಚಾರ ನಿಯಂತ್ರಕರ ಬಳಿ ಹೋಗಿ ಎಂಟ್ರಿ ಹಾಕಿಸಿಕೊಂಡು ಬರುವವರೆವಿಗೂ ಬಸ್ಸಿನ ಚಾಲಕ ಬಸ್ಸಿನ ಇಂಜಿನ್ ಅನ್ನು ಆಫ್ ಮಾಡಿದ್ದರು.
ನಿರ್ವಾಹಕನು ಬಂದ ಮೇಲೆ ಪ್ರಯಾಣಿಕರು ಬಸ್ಸಿಗೆ ಹತ್ತಿದ ನಂತರ ಮತ್ತೆ ಬಸ್ಸನ್ನ ಸ್ಟಾರ್ಟ್ ಮಾಡಿ ಹೊರಡಲು ಪ್ರಾರಂಭಿಸಿದಾಗ ಬಸ್ಸು ಸ್ಟಾರ್ಟ್ ಆಗದೆ ಬಸ್ಸಿನ ಚಾಲಕ ಪರದಾಡುವಂಥ ಪರಿಸ್ಥಿತಿ ಎದುರಾಯಿತು.
ಆ ಸಂದರ್ಭದಲ್ಲಿ ಚಾಲಕನು ಬಸ್ಸಿನ ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಬಸ್ಸನ್ನು ತಳ್ಳುವಂತೆ ಹೇಳಿದ್ದರಿಂದ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಹಾಗೂ ನಿರ್ವಾಹಕರು ಸೇರಿ ಬಸ್ಸನ್ನ ತಳ್ಳಿ ಸ್ಟಾರ್ಟ್ ಮಾಡಿಕೊಂಡು ಹಾಸನದ ಕಡೆಗೆ ಬಸ್ಸು ಪ್ರಯಾಣ ಬೆಳೆಸಿತು.
ಹಾಸನ ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಸಾರಿಗೆ ಸಂಸ್ಥೆಯ ಬಸ್ ಗಳ ಸ್ಥಿತಿ-ಗತಿಗಳ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಂಡು ಸಂಸ್ಥೆಯ ವಾಹನಗಳನ್ನು ಸುಸ್ಥಿತಿಯಲ್ಲಿ ಇಡುವ ರೀತಿಯಲ್ಲಿ ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕಾಗಿ ಪ್ರಯಾಣಿಕರ ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೇಳಿ ಕೇಳಿ ಆಲೂರು ತಾಲೂಕು ಬೇಲೂರು ತಾಲೂಕು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಆನೆಯ ಹಾವಳಿ ಹೆಚ್ಚಾಗಿರುವುದರಿಂದ ರಸ್ತೆಯ ಮಧ್ಯದಲ್ಲಿ ಈ ರೀತಿಯ ಪರಿಸ್ಥಿತಿ ಉದ್ಭವ ಆದರೆ ಪ್ರಯಾಣಿಕರು ಹಾಗೂ ಚಾಲಕರು ನಿರ್ವಾಹಕರು ಸಂಕಷ್ಟಕ್ಕೆ ಸಿಲುಕುತ್ತಾರೆ ಆದುದರಿಂದ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಸಾರಿಗೆ ಸಂಸ್ಥೆಯ ವಾಹನಗಳನ್ನು ಸುಸ್ಥಿತಿಯಲ್ಲಿಡುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿ ಪ್ರಯಾಣಿಕರ ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
