ಬೇಲೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಹಾಗು ಹಾಸನ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಇದೇ 9 ಮತ್ತು 10 ರಂದು ರಾಜ್ಯ ಮಟ್ಟದ ಪದಾದಿಕಾರಿಗಳಿಗೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡು ಸಮೀಪದಲ್ಲಿರುವ ಪುಷ್ಪಗಿರಿ ಮಹಾಸಂಸ್ತಾನದಲ್ಲಿ, ದೊಡ್ಡ ಮಠದ ಪೂಜ್ಯ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ಹಾಗು ಪೂಜ್ಯ ಶ್ರೀ ಶ್ರೀ ಸೋಮೇಶ್ವರ ಶೀವಾಚಾರ್ಯ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಎರಡು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಗಾರದಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲೆ ಹಾಗು ತಾಲೂಕು ಘಟಕದ ಪದಾದಿಕಾರಿಗಳು ಭಾಗವಹಿಸಲಿದ್ದಾರೆ.

ಕಾರ್ಯಗಾರವನ್ನು ಸಚಿವರಾದ ಈಶ್ವರ ಖಂಡ್ರೆ ಅವರು ಉದ್ಘಾಟಿಸಲಿದ್ದಾರೆ ಹಾಗು ಜಿಲ್ಲಾ ಅಧ್ಯಕ್ಷರಾದ ನವಿಲೆ ಪರಮೇಶ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಎರಡು ದಿನದ ಕಾರ್ಯಗಾರದಲ್ಲಿ ವಿವಿದ ವಿಷಯಗಳ ಮೇಲೆ ಐದು ಅಧಿವೇಶನಗಳು ನೆಡೆಯಲಿವೆ. ಬಾಳೆಹೊಸುರು ಮಠ ಗದಗ ದ ಪೂಜ್ಯ ಶ್ರೀ ಶ್ರೀ ದಿಂಗಲೇಶ್ವರ ಸ್ವಾಮೀಜಿಗಳು ಸೇರಿದಂತೆ ಹಾಸನ ಜಿಲ್ಲೆಯ ಸ್ವಾಮೀಜಿಗಳು ಪ್ರತಿ ಕಾರ್ಯಗಾರದ ದಿವ್ಯ ಸಾನಿದ್ಯ ವಹಿಸಲಿದ್ದಾರೆ.ಸಮಾರಂಭದ ಸಮಾರೋಪ ಸಮಾರಂಭದಲ್ಲಿ ರಾಜ್ಯಧ್ಯಕ್ಷರಾದ ಶಂಕರ ಮಹಾದೇವ ಬಿದರಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಕಾರ್ಯಗಾರದಲ್ಲಿ 500ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಲ್ಲಿದ್ದು, ಪದಾದಿಕಾರಿಗಳಿಗೆ ಕರ್ತವ್ಯಗಳು ಹಾಗು ಹಕ್ಕುಗಳ ಪರಿಚಯವಾಗಲಿ.

ಸಮಾಜದ ಸಂಘಟನೆ ಮತ್ತು ಶ್ರೆಯೊಭಿವೃದ್ದಿಗೆ ದುಡಿಯಲಿ ಎನ್ನುವ ಸದುದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.-

ಇಂತಿ : ಶೀತಲ್ ಹೆಚ್.ವಿ.ಜಿಲ್ಲಾ ನಿರ್ದೇಶಕರು, ಹಾಸನ ಜಿಲ್ಲೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *