
ಕೊಡ್ಲಿಪೇಟೆ : ಕ್ರಷಿ ಪತ್ತಿನ ಸಹಕಾರ ಸಂಘದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಬೇಟಿ ನೀಡಿದ ತಾಲೂಕು ಆಹಾರ ನಿರಿಕ್ಷಕರಾದ ಯಶಸ್ವಿನಿ ರವರು ಫಲಾನುಭವಿಗಳ ಸಬೆ ನಡೆಸಿ ಅಹವಾಲು ಆಲಿಸಿ,ಕಾಳ ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಮಾರದಂತೆ ಜಾಗ್ರತಿ ಮೂಡಿಸಿದರು,ಅಕ್ಕಿ ಮಾರುವುದು ತಗೊಳ್ಳುವುದು ಕಂಡು ಬಂದಲ್ಲಿ ಮಾರಿದವರ ಮತ್ತು ತಗೊಂಡವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಗ್ರಾಹಕರುಗಳು ಅಕ್ಕಿ ವ್ಯಾಪಾರಸ್ಥರಿಗೆ ರೇಷನ್ ಅಕ್ಕಿಯನ್ನು ಮಾರುತ್ತಿರುವುದಾಗಿ ಹೇಳಿದರು.
ಹೋಟೆಲ್ ,ಬೇಕರಿಗಳಲ್ಲಿ ಶುಚಿತ್ವ ವಿಲ್ಲದ ಬಗ್ಗೆ ಬಗ್ಗೆ ದೂರಿದರು,ಈ ಸಂದರ್ಭದಲ್ಲಿ ತಾಲೂಕು ಆಹಾರ ನಿರಿಕ್ಷಕರ ಕಚೇರಿ ಸಿಬ್ಬಂದಿ ವಿನೋದ್ ಕುಮಾರ್ ,ವಿಎಸ್ಸೆಎಸ್ಸೆಎನ್ ನ್ಯಾಯ ಬೆಲೆ ಅಂಗಡಿಯ ನಿರ್ವಹಕಾ ಶಶಿ ,ಕ್ರಷಿ ಪತ್ತಿನ ಸಹಕಾರ ಸಂಘದ ನಿರ್ದೆಶಕರುಗಳಾದ ಕೆ.ಆರ್.ಚಂದ್ರಶೇಖರ್ ,ಪುಷ್ಪಲತಾ ,ಗ್ರಾಹಕರಾದ ಅನಿಲ್, ಅರುಣಾ ,ಹಾಲಪ್ಪ ,ಕೇಶವ,ರಘು ಮುಂತಾದವರು ಇದ್ದರು,
