ಸಕಲೇಶಪುರ – ಹಿಂದೂ ಹಿತರಕ್ಷಣಾ ವೇದಿಕೆ ಸಮಿತಿಯ ಸಕಲೇಶಪುರ ತಾಲ್ಲೂಕಿನ ಪದಾಧಿಕಾರಿಗಳ ಆಶ್ರಯದಲ್ಲಿ ಆಗಸ್ಟ್ ತಿಂಗಳಲ್ಲಿ ನಾಲ್ಕು ಕಾರ್ಯಕ್ರಮಗಳಿದ್ದು ಈ ಹಿನ್ನೆಲೆಯಲ್ಲಿ ಮಹಾಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 08/08/2025 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಕಾರ್ಯಕರ್ತರು ಸೇರಲಿದ್ದು ಅಲ್ಲಿಂದ ನಗರದ ಸರ್ಕಾರಿ ಕಚೇರಿಗಳು. ವಿದ್ಯಾಸಂಸ್ಥೆಗಳು. ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರ ರಕ್ಷಣೆಗಾಗಿ ರಕ್ಷಾಬಂಧನ ಕಾರ್ಯಕ್ರಮಗಳು ನಡೆಯಲಿದೆಯಂತೆ.

ದಿನಾಂಕ 13/08/2025 ರಂದು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವನ್ನು ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಪಂಜಿನ ಮೆರವಣಿಗೆ ಮಾಡಿ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 17/08/2025 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುರಭವನದಲ್ಲಿ 9 ವರ್ಷದೊಳಗಿನ ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ವೇಷದಾರಿಗಳ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮ ಭಾಗವಹಿಸುವ ಮಕ್ಕಳ ಹೆಸರನ್ನು ಆಯೋಜಕರ ನಂಬರ್’ಗೆ ಕರೆಮಾಡಿ ನೊಂದಾಯಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಹಾಗೂ ದಿನಾಂಕ 31 ರಂದು ಭಾನುವಾರ ದಿನ ರಾಮಧೂತ ಹಿಂದೂ ಮಹಾಗಣಪತಿಯ ಬೃಹತ್ ವಿಸರ್ಜನಾ ಮೆರವಣಿಗೆಯಲ್ಲಿ ಸಕಲೇಶಪುರದ ಸಮಸ್ತ ಹಿಂದೂ ಸಮಾಜ ಭಾಗವಹಿಸುವಂತೆ ಮನವಿ ಮಾಡಿದರು.

ಈ ಎಲ್ಲಾ ಕಾರ್ಯಕ್ರಮಗಳ ರೂಪುರೇಷೆಗಾಗಿ ಆಗಸ್ಟ್ 08 ರಂದು ನಡೆಯಲಿರುವ ಮಹಾಸಂಪರ್ಕ ಅಭಿಯಾನದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಎಲ್ಲಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಹಿಂದೂ ಹಿತರಕ್ಷಣಾ ವೇದಿಕೆಯ ಸಕಲೇಶಪುರ ತಾಲ್ಲೂಕಿನ ಸಂಚಾಲಕ್ ಶಿವು ಜಿಪ್ಪಿ ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *