
ಆಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ 1964 ನೇ ಮಧ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದವರು ಬಂದು ಕುಟುಂಬದ ಏಳಿಗೆಯು ವ್ಯಸನಮುಕ್ತ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಇಂದಿನ ಯುವ ಜನತೆ ಹಲವಾರು ದುಶ್ಚಟಗಳಿಗೆ ಒಳಗಾಗಿ ತಮ್ಮ ನೆಮ್ಮದಿಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೂಡ ಕೆಡೆಸುತ್ತಿದ್ದಾರೆ
ಇಂದು ಮಧ್ಯಪಾನ ಚಟಕ್ಕೆ ದಾಸರಾಗಿರುವ ಜನರು ಸಮಾಜದಲ್ಲಿ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿ ತನಗರಿವಿಲ್ಲದೆ ಅಪರಾಧಗಳಲ್ಲಿ ಭಾಗವಹಿಸುತ್ತಿದ್ದಾರೆ ಆದುದರಿಂದ ಮಧ್ಯಪಾನ ಚಟಕ್ಕೆ ಒಳಗಾಗಿರುವವರು ತಮ್ಮಗಳ ಮನೆಗಳಲ್ಲಿ ಇದ್ದರೆ ಅವರನ್ನು ಈ ಮಧ್ಯವರ್ಜನ ಶಿಬಿರಕ್ಕೆ ಸೇರಿಸಿ ಸತ್ಪರ್ಜೆಗಳಾಗಿ ರೂಪುಗೊಳಿಸಲು ಸಹಕರಿಸಿ ಎಂದು ತಿಳಿಸಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೇಣುಕಾ ಪ್ರಸಾದ್ ಅಧ್ಯಕ್ಷರು ತಾಲೋಕು ವೀರಶೈವ ಸಂಘ ಇವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಎಷ್ಟು ಕುಟುಂಬದ ಕಣ್ಣೀರನ್ನು ಒರೆಸುವ ಕೆಲಸಗಳನ್ನು ಮಾಡುತ್ತಿದೆ ಕಾರಣ ಮಧ್ಯವರ್ತಿನ ಶಿಬಿರಗಳನ್ನು ಹಮ್ಮಿಕೊಳ್ಳುವ ಮುಖಾಂತರ ಮಧ್ಯಪಾನಕ್ಕೆ ದಾಸರಾಗಿ ಸಂಸಾರದ ಜವಾಬ್ದಾರಿಯನ್ನು ನಿರ್ಲಕ್ಷಿಸಿರುವಂತಹ ವ್ಯಸನಿಗಳನ್ನು ಗುರುತಿಸಿ ಶಿಬಿರದಲ್ಲಿ ಅವರಗೆ ಅರಿವನ್ನ ಮೂಡಿಸಿ ಮದ್ಯಪಾನ ದುಶ್ಚಟ್ಟದಿಂದ ಆಗುವ ದುಷ್ಪರಿಣಾಮಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮಧ್ಯಪಾನವನ್ನು ತ್ಯಜಿಸುವ ಪ್ರೀತಿಯಲ್ಲಿ ಅವರನ್ನು ತಯಾರು ಮಾಡುವ ಮಹಾ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಮಾಡುತ್ತಿದ್ದು ಇವರ ಸಮಾಜಮುಖಿ ಕೆಲಸಗಳು ಇನ್ನೂ ಕೂಡ ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್,ತಾ.ಪಂ ಇ.ಓ ಸುಬ್ರಹ್ಮಣ್ಯ ಶರ್ಮ,ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ, ತಾಲೂಕು ಆರೋಗ್ಯ ಅಧಿಕಾರಿ ನಿಸಾರ್ ಫಾತಿಮಾ,ಡಾ. ಜಯರಾಜ್, ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ,ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ,ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮುಕೇಶ್, ಜಿಲ್ಲಾ ನಿರ್ದೇಶಕ ಸುರೇಶ್ ಮೊಯ್ಲಿ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರುಗಳಾದ ಧರ್ಮರಾಜು, ಮಲ್ಲಿಕಾರ್ಜುನ, ಮೋಹನ್ ಕುಮಾರ್, ಎಂ.ಬಾಲಕೃಷ್ಣ, ಎಂ.ಕೆ ರಾಜಶೇಖರ್, ತಾಲೂಕಿನ ಯೋಜನಾಧಿಕಾರಿಗಳಾದ ರತ್ನಾಕರ್ ಕೊಟರಿ, ಸೇವಾ ಪ್ರತಿನಿಧಿಗಳು,ಶೌರ್ಯ ವಿಪತ್ತು ತಂಡದ ಸದಸ್ಯರು, ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ,ಶಿಬಿರಾಧಿಕಾರಿ ಜಯಾನಂದ,ಆರೋಗ್ಯ ಕಾರ್ಯಕರ್ತರು ಜಯಲಕ್ಷ್ಮಿ,ಜನಜಾಗೃತಿ ಮೇಲ್ವಿಚಾರಕರಾದ ವಸಂತ, ಇತರರು ಉಪಸ್ಥಿತರಿದ್ದರು.
