
ಆಲೂರು : ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬರು ನೀರುಪಾಲಾದ ದುರ್ಘಟನೆ ಆಲೂರು ತಾಲ್ಲೂಕಿನ ಬೆಳಮೆ ಗ್ರಾಮದಲ್ಲಿ ನಡೆದಿದೆ.
ರಾಮೇಶ್ವರ ಗ್ರಾಮದಲ್ಲಿ ವಾಸವಿದ್ದ ಬಿಕ್ಕೋಡು ಗ್ರಾಮದ ದೇವರಾಜ್(38) ಮೃತಪಟ್ಟವರು ವರಮಹಾಲಕ್ಷ್ಮಿ ಹಬ್ಬವಿರುವ ಕಾರಣ ಅವರುಕೆರೆಗೆ ಹೂವು ಕೀಳಲು ಹೋಗಿದ್ದರು. ಈ ವೇಳೆ ಕೆರೆಯಲ್ಲಿ ಮುಳುಗಿಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ,ದೇವರಾಜ್ ಅವರ ಶವವನ್ನು ಹೊರತೆಗೆದರು.
ಸ್ಥಳಕ್ಕೆ ಭೇಟಿ ನೀಡಿದಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಆಲೂರು ಪೊಲೀಸ್ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
