ಆಲೂರು : ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಕಣತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಸೇರಿದ ವಾಟೆಹೊಳೆ ನಾಲೆಯು ಈ ಭಾಗದಲ್ಲಿ ನೂರಾರು ರೈತರು ವಾಟೆಹೊಳೆ ನಾಲೆಯ ನೀರನ್ನು ಕೃಷಿಗೆ ಬಳಕೆ ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ ಈ ಗ್ರಾಮೀಣ ಭಾಗದಲ್ಲಿ ರೈತರ ಜಮೀನಿಗೆ ತೆರಳಲು ಅಕ್ಕ ಪಕ್ಕದ ಜಮೀನಿನ ಮಾಲೀಕರು ರಸ್ತೆಯನ್ನು ಆಕ್ರಮಿಸಿಕೊಂಡಿದಲ್ಲದೆ ಬೇಲಿ ಗಿಡ ಗಂಟೆಗಳು ಬೆಳೆದುನಿಂತಿದೆ ಮತ್ತು ಕೊಡಗಿಹಳ್ಳಿ ಗ್ರಾಮದ ಡೀಪ್ ಕಟಿಂಗ್ ವ್ಯಾಪ್ತಿಯಲ್ಲಿ ವಾಟೆಹೊಳೆ ನಾಲೆಗೆ ಸೇರಿದ ಜಾಗದಲ್ಲಿ ಅನ್ಯ ವ್ಯಕ್ತಿಗಳು ಹಗಲು ರಾತ್ರಿ ಎನ್ನದೆ ರಾತ್ರೋ ರಾತ್ರಿ ಜೆ ಸಿ ಬಿ ಮುಖಂತರ ಅಗೆದು ಲಾರಿಯಲ್ಲಿ ಸಾವಿರಾರು ಟನ್ ಮಣ್ಣನ್ನು ಪಟ್ಟಣದ ಖಾಸಗಿ ಲೇಔಟ್ಗೆ ಭೂಮಾಫಿಯಾದವರು ಸಾಗಿಸುತ್ತಿದ್ದಾರೆ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಾಟೆಹೊಳೆ ನಾಲೆಯ ಅಧಿಕಾರಿಗಳ ಗಮನಕ್ಕೆ ತಂದರು..

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಒದಗಿಸಲಾಗುತ್ತಿರುವ ಸವಲತ್ತುಗಳ ಬಗ್ಗೆ ಹಾಗೂ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು ಹಾಗೂ ಕಣತೂರು ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಿಕೊಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು..

ಸಭೆಯನೂಡಲ್ ಅಧಿಕಾರಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಕೇಶವಮೂರ್ತಿ ಮಾತಾನಾಡಿ ಗ್ರಾಮ ಪಂಚಾಯತಿಯು ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದೆ ಬರೀ ರಸ್ತೆ ಚರಂಡಿ ಮತ್ತು ಬೀದಿ ದೀಪಗಳು ಮತ್ತು ರಸ್ತೆಗಳನ್ನು ಸರಿ ಮಾಡುವುದರಲ್ಲೇ ನಮ್ಮ ಹಲವಾರು ಗ್ರಾಮ ಪಂಚಾಯಿತಿಗಳು ಸೀಮಿತವಾಗಿವೆ ಸ್ಥಳೀಯ ಆಡಳಿತ ವ್ಯವಸ್ಥೆಯ ಆಧಾರಸ್ಥಂಭಗಳಾದ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳಬಲರ್ವಧನೆಯ ಬಗ್ಗೆ ನಾವ್ಯಾರು ಒತ್ತು ಕೊಡುತ್ತಿಲ್ಲ ಗ್ರಾಮೀಣ ಪ್ರದೇಶಗಳಿಗೆ ಆಧುನಿಕ ಸೇವೆಗಳು ಮತ್ತು ಸೌಕರ್ಯಗಳನ್ನು ಒದಗಿಸುವಅವಶ್ಯಕತೆಯಿದೆ ಗ್ರಾಮೀಣ ಸಮಸ್ಯೆಯನ್ನು ಪರಿಹರಿಸಲು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳು ಮತ್ತು ಜೀವನೋಪಾಯಗಳನ್ನು ಸೃಷ್ಟಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದನ್ನು ನಾವು ಅರಿತು ಕೆಲಸಮಾಡಬೇಕಿದೆ ಎಂದು ಹೇಳಿದರು.

ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಗಾಂಧೀಜಿಯವರು ಪಂಚಾಯತ್ ರಾಜ್ ವ್ಯವಸ್ಥೆಗೆ ಒತ್ತು ನೀಡಿದ್ದರು. ಸ್ವದೇಶಿ ವಸ್ತುಗಳನ್ನು ಅಳವಡಿಸಿಕೊಳ್ಳುವಂತೆ ನಿರಂತರವಾಗಿ ಜಾಗೃತಿ ಮೂಡಿಸಿದರು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವುದು ಬಡ ಕುಟುಂಬಗಳನ್ನು ತಲುಪುವುದು, ಶಿಕ್ಷಣ, ಆರೋಗ್ಯ, ವಸತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಕೇಂದ್ರ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳಿಂದ ವಂಚಿತರಾದ ಜನರಿಗೆ ಪ್ರಯೋಜನನೀಡುವುದು ಗ್ರಾಮ ಸ್ವರಾಜ್ಯ ಮುಖ್ಯ ಉದ್ದೇಶವಾಗಿದೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು ಹಾಸನ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು ಅದನ್ನು ನಿರ್ಮಲನೆ ಮಾಡಬೇಕಾದ ಜವಾಬ್ದಾರಿ ಪೋಷಕರ ಮೇಲಿದ್ದು ಅಂತಹ ಪ್ರಕರಣಗಳು ಕಂಡು ಬಂದರೆ ಕೊಡಲೇ ನಮ್ಮ ಗಮನಕ್ಕೆ ತರುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದರು ಮತ್ತು ಸರ್ಕಾರದಿಂದ ಬಾಗ್ಯಲಕ್ಸ್ಮಿ ಯೋಜನೆಯಡಿ ಸಿಗುವಂತಹ ಸೌಲಭ್ಯಗಳನ್ನು ಮತ್ತು ಬಾಣಂತಿ ಮಹಿಳೆಯರು ತಮ್ಮ ಮೂಲ ದಾಖಲಾತಿಗಳನ್ನು ನೀಡಿ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು..

ಇನ್ನೂ ವಿದ್ಯುತ್ ಸಮಸ್ಯೆ ತಾಲ್ಲೂಕಿನ ಹಳ್ಳಿಗಳಲ್ಲಿ ಕಾಡುತ್ತಿದ್ದು ಶೀಘ್ರದಲ್ಲಿ ಬಗೆಹರಿಸಿಕೊಡುವಂತೆ ಕೆ ಇ ಬಿ ಅಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದರು.

ಈ ಸಭೆಯಲ್ಲಿ ಜೆ ಜೆ ಮ್ ಕುಡಿಯುವ ನೀರಿನ ಬಗ್ಗೆ ಚರ್ಚಿಸಲಾಹಿತು ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಸಿಗುವಂತಹ ಕೃಷಿ ಉಪಕರಣಗಳನ್ನು ಮತ್ತು ಅಡಿಕೆ ಸಸಿಗಳನ್ನು ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.ಈ ಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 90% ಗಿಂತ ಹೆಚ್ಚು ಅಂಕ ಗಳಿಸಿದ ಶಾಲೆ ಕಾಲೇಜು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ರಾಧ ಉಪಾಧ್ಯಕ್ಷರು. ಕವಿತಾ ವಜ್ರೇಶ್. ನಾಗರತ್ನ. ಪದ್ಮ ಜಗದೀಶ್. ನಿರ್ವಾಣಯ್ಯ ಸದಸ್ಯರುಗಳು. ತಾಲೂಕ್ ಪಂಚಾಯತ್ ಪಂಚಾಯಿತಿ ಸಹಾಯಕ ನಿರ್ದೇಶಕರು ಕೇಶವಮೂರ್ತಿ, ಕೆಇಬಿ ಜೆ ಈ ಕುಮಾರ್, ನೀರಾವರಿ ಇಲಾಖೆ ಇಂಜಿನಿಯರ್ ಸಂದೀಪ್, ತೋಟಗಾರಿಕೆ ಬಸವರಾಜ್, ನೀರು ಮತ್ತು ನೈರ್ಮಲ್ಯ ಇಲಾಖೆ ಶರತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶಾ, ಆರೋಗ್ಯ ಇಲಾಖೆ ರಾಜುರವರು ಗ್ರಾಮ ಪಂಚಾಯತಿ ಪಿಡಿಒ ಪುರುಷೋತ್ತಮ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ರವಿ ಹೆಚ್ ಎಸ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *