
ಹಾಸನ : ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಾಸನ ಜಿಲ್ಲಾ ವಕೀಲರ ಸಂಘ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಹಾಸನಾಂಬ ಲಯನ್ಸ್ ಕ್ಲಬ್ , ಇವರುಗಳ ವತಿಯಿಂದ ಹಾಸನ ಮಹಾನಗರ ಪಾಲಿಕೆ, ಪೌರಕಾರ್ಮಿಕರ ಸಹಕಾರದೊಂದಿಗೆ ದಿನಾಂಕ : 14-08-2025 ರಂದು ಬೆಳಿಗ್ಗೆ 6:30 ರಿಂದ 8:30 ರವರೆಗೆ ವಕೀಲರ ಸಂಘದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಕೊಳ್ಳಲಾಗಿತ್ತು.
ಸುಮಾರು 35 ಜನ ಸದಸ್ಯರುಗಳು ಪಾಲ್ಗೊಂಡಿದ್ದು, ಆವರಣವನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿ ಟ್ರಾಕ್ಟರ್ ನಲ್ಲಿ ಅವುಗಳನ್ನು ತುಂಬಿ ಬೇರೆಡೆ ಸಾಗಿಸಲಾಯಿತು.
ಹಾಗೂ ಸುಮಾರು 25 ವಿವಿದ ಹಣ್ಣಿನ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾರಿಗೂ ತುಂಬು ಹೃದಯದ ಧನ್ಯವಾದಗಳು.**ಇಂತಿ,**ಅಧ್ಯಕ್ಷರು,ಕಾರ್ಯದರ್ಶಿಗಳು* *ಹಾಗೂ ಪದಾಧಿಕಾರಿಗಳು,**ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು,**ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಹಾಸನ.*





