ಈ ಕಾರ್ಯಕ್ರಮವನ್ನು ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆ ಇದರ ಪದಾಧಿಕಾರಿಗಳಾದ ಅಹಮದ್ ಹಗರೆ ಅವರು ಸಂವಿಧಾನ ಪೀಠಿಕೆ ಮತ್ತು ಸ್ವಾತಂತ್ರ್ಯದ ಬಗ್ಗೆ ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ನೆಹರು ಅವರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಚಿನ್ನೇನಹಳ್ಳಿ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂಧರ್ಭದಲ್ಲಿ ಸಕಲೇಶಪುರ ವಿಭಾಗದ ಲೆಕ್ಕಾಧಿಕಾರಿಗಳಾದ ಡಾ.ಎಸ್.ಎನ್ ಹರೀಶ್ ರವರು ಹಾಗೂ ವಿಭಾಗ ಕಛೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಜೆ.ರವಿ ಮತ್ತು ಸಕಲೇಶಪುರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜನಿಯರ್ ವೈ.ಎನ್.ಹರೀಶ್ ರವರು ಹಾಗೂ ಕ.ವಿ.ಪ್ರ.ನಿ.ನೌಕರರ ಸಂಘ ಸಕಲೇಶಪುರ ವಿಭಾಗದ ಅಧ್ಯಕ್ಷರು ಆದ ಚನ್ನಬಸಪ್ಪ ರಾಮಣ್ಣನವರ್ ಮುಖ್ಯ ಅಥಿತಿಗಳಾಗಿ ಭಾವಹಿಸಿದ್ದರು ಸಾಹಿತಿಗಳಾದ ಸಮುದ್ರವಳ್ಳಿ ವಾಸು ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *