
ಸಕಲೇಶಪುರ, ಆಗಸ್ಟ್ 15, 2025 – ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) – ಸಕಲೇಶಪುರ ವಿಧಾನಸಭಾ ಘಟಕದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು, ಸದಸ್ಯರು ಸ್ಥಳೀಯರು ಹಾಗೂ ವಿಮೆನ್ ಇಂಡಿಯಾ ಮೂಮೆಂಟಿನ ನಾಯಕಿಯರು ಭಾಗವಹಿಸಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು ಮತ್ತು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಹಬಾಳ್ವೆಯ ಸಂಕಲ್ಪವನ್ನು ಪುನರುಚ್ಚರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ವಾಜಿದ್ ಪಾಶ ಧ್ವಜಾರೋಹಣ ಮಾಡಿದರು ಹಾಗೂ ರಾಷ್ಟ್ರಗೀತೆ ಹಡಲಾಯಿತು .
ನಂತರ ನಡೆದ ಕಾರ್ಯಕ್ರಮದಲ್ಲಿ ನಾಯಕರು ಮಾತನಾಡಿ, ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವುದು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಭ್ರಷ್ಟಾಚಾರ, ಅಸಮಾನತೆಯನ್ನು ತೊಡೆದುಹಾಕುವ ಬಗ್ಗೆ ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದಿಕ್ ಆನೆಮಹಲ್, ಎಸ್ ಡಿ ಪಿ ಐ ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ವಾಜಿದ್ ಪಾಷಾ, ಎಸ್ ಡಿ ಪಿ ಐ ಸಕಲೇಶಪುರದ ಸಹ ಕಾರ್ಯದರ್ಶಿಯಾದ ಸಾಧಿಕ್ ಮಂಜರಾಬಾದ್, ಮಾಧ್ಯಮ ಉಸ್ತುವಾರಿಯಾದ ಯಾಸೀನ್ ಸಕಲೇಶಪುರ, ಆನೆಮಹಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸುಹಾರ ಸಲೀಂ, ಜಮೀಲ್, ಮುನೀರ್, ಸಲೀಂ ಫಿಶ್, ಅಶ್ರಫ್ ಚಿಲ್ಮಿ, ಮುಹೀದ್, ಸಮಿಉಲ್ಲಾ, ಹಾಗೂ ಪಕ್ಷದ ಅನೇಕ ನಾಯಕರು ಉಪಸ್ಥಿತರಿದ್ದರು.


