ಆಲೂರು: ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಪ್ಲಾಂಟರ್ಸ್ ಕ್ಲಬ್ ಆವರಣದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅದ್ದೂರಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಕೆ ಪಿ ಹೇಮಂತ್ ಕುಮಾರ್ ವಹಿಸಿ ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಕೆ. ಹೊಸಕೋಟೆಯ ಎಲ್ಲಾ ಶಾಲೆಗಳ ಮಕ್ಕಳು ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು.

ಎಲ್ಲಾ ಶಾಲೆಯ ಮಕ್ಕಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ಲಾಂಟರ್ಸ್ ಕ್ಲಬ್ ವತಿಯಿಂದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸಿದರು.ಲಯನ್ಸ್ ಕ್ಲಬ್ ವತಿಯಿಂದ ನೋಟ್ ಬುಕ್ ಪೆನ್ನುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷರು ಹೇಮಂತ್ ಕುಮಾರ್, ಕೆಂಚಮ್ಮ ಹೊಸಕೋಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ, ಖಜಾಂಚಿ ರಮೇಶ್ ಕೊರೇಗಲ್, ಹಿರಿಯ ಮುಖಂಡರು ಕೊಟ್ಟೂರಪ್ಪ, ಶಾಮರಾವ್ , ರೈತ ಸಂಘದ ಅಧ್ಯಕ್ಷ ಮೋಹನ್ , ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪರಮೇಶ್ , ಕೆ ಹೊಸಕೋಟೆ ಪೊಲೀಸ್ ಉಪಠಾಣೆ ಮುಖ್ಯಪೇದೆ ರವಿ,ಸಿ ಆರ್ ಪಿ ಮೈಮುನ,ಎಸ್ ಕೆ ಎನ್ ಆರ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ಸ.ಹಿ.ಪ್ರ. ಶಾಲೆಮುಖ್ಯ ಶಿಕ್ಷಕಿ ನಾಗರತ್ನ, ಪ್ಲಾಂಟರ್ಸ್ ಕ್ಲಬ್ ಕಾರ್ಯದರ್ಶಿ ಷಣ್ಮುಖ, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಮೋಹನೇಶ್ವರ್, ಮತ್ತು ಎಲ್ಲ ಸದಸ್ಯರುಗಳು, ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಕೊಟ್ಟೂರಪ್ಪ, ಮಾಜಿ ಅಧ್ಯಕ್ಷರುಗಳಾದ ಸುಧಾಕರ್ , ಹರೀಶ್ , ಕೆ ಎನ್ ಕುಮಾರ್ , ಕೆ ಬಿ ಕುಮಾರ್, ದಿನೇಶ್, ಕುಮಾರ್ ಬೆಂಬಳೂರು, ಜಗದೀಶ್, ಮೋಹನ್ ಕಾಡ್ಲೂರು, ದೇವರಾಜು, ದಿಲೀಪ್, ದರ್ಶನ್, ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *