
ಸಕಲೇಶಪುರ : ಪಟ್ಟಣದ ಮುಖ್ಯ ಬಿ. ಎಂ ರಸ್ತೆ ಗೆ ಹೊಂದಿಕೊಂಡಿದ್ದು ಅಲ್ಲಿಂದ ಎಲ್. ಎಂ ರಸ್ತೆ ಕಡೆಗೆ ಹೋಗುವ ರಸ್ತೆಯಲ್ಲಿ ಈ ಹಿಂದೆ ಶಾಸಕರಾಗಿದ್ದ ದಿವಂಗತ ಬಿ. ಬಿ ಶಿವಪ್ಪನವರ ಅದಿಕಾರದ ಸಮಯದಲ್ಲಿ ಧ್ವಜ ಕಟ್ಟೆ ಯನ್ನು ನಿರ್ಮಿಸಿದ್ದು ನಂತರ ತಾಲೂಕಿನ ವೀರಯೋದ ಎ. ಕೆ ಸಾಗರ್ ರವರ ಚಿತ್ರವನ್ನು ಮಾಡಿ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತಿತ್ತು.
ಕೆಲವು ವರ್ಷ ಗಳ ನಂತರ ಬೀದಿ ಬದಿ ವ್ಯಾಪಾರಿಯೊಬ್ಬರು ಕಟ್ಟೆ ಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಕಾರ್ಯ ಕ್ರಮಗಳು ನಿಂತು ಹೋಗಿದ್ದವು.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವರ್ತಕರೆಲ್ಲರು ಸೇರಿ ಒತ್ತುವರಿ ತೆರವುಗೊಳಿಸಿ ವೀರ ಯೋಧ ಎ. ಕೆ ಸಾಗರ್ ಚಿತ್ರವನ್ನು ಹೊಸದಾಗಿ ಮಾಡಿ ಕಟ್ಟೆಯನ್ನು ನವಿಕರಣ ಮಾಡಿ ಪುರಸಭಾ ಸದಸ್ಯರುಗಳಾದ ಇಸ್ರಾರ್, ಸರಿತಾ, ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ, ನೇತೃತ್ವದಲ್ಲಿ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ವರ್ತಕರುಗಳಾದ ಮಂಜಣ್ಣ, ಜಗದೀಶ್, ಜಮೀಲ್ ಅಹಮ್ಮದ್, ಚಿಂಟೂ, ವಾಸೀಮ್ ಮುಂತಾದವರು ಹಾಜರಿದ್ದರು
