
ಸಕಲೇಶಪುರ : ತಾಲೂಕಿನ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಪ್ರಕಾಶ್ ನೆರವೇರಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಕೊರೋನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನ ಲೆಕ್ಕಿಸದೆ ಮನೆ ಮನೆಗೆ ಹೋಗಿ ಪ್ರತಿಯೊಬ್ಬರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹತ್ವದ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಣಿಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಪ್ರಕಾಶ್, ಉಪಾಧ್ಯಕ್ಷರು ಶಶಿಕಲಾ ದಯಾನಂದ್ ,ಪಿ ಡಿ ಓ ರಘು , ಕಾರ್ಯದರ್ಶಿ ರಮೇಶ್ , ಗ್ರಾಮ ಪಂಚಾಯ್ತಿಯ ಸದಸ್ಯರುಗಳಾದ ಇಬ್ರಾಹಿಂ, ಶಿಲ್ಪ ಜಗದೀಶ್, ತಾರಾ ಮಹೇಶ್, ಸಾವಿತ್ರಿ ಜಗದೀಶ್ , ಯೋಗ ಗುರುಗಳು ಹರೀಶ್ , ಮುಖ್ಯ ಶಿಕ್ಷಕರು ರವಿ, ಭಾಷಾ, ರಾಜೇಶ್ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಶಾಲಾ ಮಕ್ಕಳು,ಉಪಸ್ಥಿತರಿದ್ದರು.



