
ಆಲೂರು :- ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಮಗ್ಗೆ ಗ್ರಾಮ ಪಂಚಾಯಿತಿ ಮಗ್ಗೆ ಬಸ್ ನಿಲ್ದಾಣದಲ್ಲಿ ಕಳೆದ 8 – 10 ದಿನಗಳಿಂದ ರಿಪೇರಿ ಆಗದೆ ಅರ್ಧಕ್ಕೆ ನಿಂತು ಜೋತಾಡುತ್ತಿರುವ ಐ ಮಾಸ್ ಲೈಟ್ ನಿಂದ ಯಾವ ಸಮಯದಲ್ಲಿ ಬೇಕಾದರೂ ಅಪಾಯ ಸಂಬವಿಸಬಹುದಾಗಿದೆ.
ಮಗ್ಗೆ ಗ್ರಾಮ ಪಂಚಾಯಿತಿಯ ಮಗ್ಗೆ ಗ್ರಾಮವು ತಾಲೂಕಿನಲ್ಲಿಯೇ ಅತೀ ಬೇಗ ಅಭಿವೃದ್ಧಿಗೊಳ್ಳುತ್ತಿರುವ ಗ್ರಾಮವಾಗಿದ್ದು, ಪ್ರತಿನಿತ್ಯ ಸಾವಿರಾರು ಜನರು ವಿವಿಧ ಕೆಲಸ ಕಾರ್ಯಗಳಿಗಾಗಿ ಪ್ರತಿನಿತ್ಯ ತಿರುಗಾಡುತ್ತಿರುತ್ತಾರೆ. ಮಗ್ಗೆ ಗ್ರಾಮವು ಬೇರೆ ಪಟ್ಟಣ ಹಾಗೂ ಹೋಬಳಿ ಮಟ್ಟದ ಗ್ರಾಮಗಳಿಗೆ ಹೋಲಿಸಿ ಕೊಂಡರೆ ವ್ಯಾಪಾರ ವ್ಯವಹಾರಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಗ್ರಾಮವಾಗಿದ್ದು,, ಗ್ರಾಮದ ಹೃದಯ ಭಾಗವಾದ ಬಸ್ ನಿಲ್ದಾಣದಲ್ಲಿರುವ ಐ ಮಾಸ್ ಲೈಟು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸುಮಾರು ಎಂಟು ದಿನಗಳಿಂದ ಐ ಮಾಸ್ ಲೈಟ್ ರಿಪೇರಿ ಆಗದೆ ಕಂಬದ ಮಧ್ಯಭಾಗದಲ್ಲಿಯೇ ನೇತಾಡುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು ಒಂದು ತಿಂಗಳಿನಿಂದ ಹೈ ಮಸ್ಟ್ ದೀಪಗಳು ಸರಿಯಾಗಿ ಚಾಲ್ತಿಯಲ್ಲಿ ಇಲ್ಲದ ಕಾರಣ8 -10 ದಿನಗಳ ಹಿಂದೆ ರಿಪೇರಿಗಾಗಿ ಬಂದವರು ಅರ್ಧಕ್ಕೆ ಇಳಿಸಿ ರೋಪ್ ಕಟ್ಟಾಗಿರುವುದಾಗಿ ರಿಪೇರಿ ಮಾಡದೆ ಹಾಗೆ ಬಿಟ್ಟು ಹೋಗಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಐ ಮಾಸ್ ಇರುವ ಪಕ್ಕದಲ್ಲಿ ಬಸ್ ನಿಲ್ದಾಣ ಇದ್ದು ಹಾಗೂ ವಾರದ ಮಾರುಕಟ್ಟೆ ಹಾಗೂ ಪ್ರತಿನಿತ್ಯ ಶಾಲಾ ಕಾಲೇಜು ಮಕ್ಕಳು ಕೂಲಿ ಕಾರ್ಮಿಕರು ಪ್ರಯಾಣಿಕರು ಬಂದು ನಿಲ್ಲುವ ಸ್ಥಳವಾಗಿದ್ದು ಯಾವುದೇ ಅನಾಹುತಗಳು ಸಂಭವಿಸುವಬಹುದು.
ಹಾಗಾಗಿ ಈ ಐಮಸ್ ಲೈಟನ್ನು ಕೊಡಲೇ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಮಾಧ್ಯಮದೊಂದಿಗೆ ಮನವಿ ಮಾಡಿಕೊಂಡಿದ್ದಾರೆ.


