
ಸಕಲೇಶಪುರ:- ತಾಲ್ಲೂಕಿನ ವನಗೂರು ಕೂಡುರಸ್ತೆಯಿಂದ ಸಕಲೇಶಪುರ ಕಡೆಗೆ ಬೆಳಿಗ್ಗೆ 8. 15 ಗಂಟೆಗೆ ಕೆ ಎಸ್ ಆರ್ ಟಿ ಸಿ ಬಸ್ ಹೋದರೆ 10 ಗಂಟೆ ತನಕ ಯಾವುದೆ ಬಸ್ ಸಕಲೇಶಪುರ ಕಡೆಗೆ ಹೊಗುವುದಕ್ಕೆ ವ್ಯವಸ್ಥೆ ಇಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. 2 ಗಂಟೆಗಳ ಅಂತರದಲ್ಲಿ ಒಂದು ಬಸ್ ವ್ಯವಸ್ಥೆ ಮಡಿಕೊಡುವಂತೆ ಕ.ರ.ವೇ ತಾಲ್ಲೂಕು ಘಟಕದವರು ಹಾಗೂ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದವರಿಂದ ಸಕಲೇಶಪುರ ಕೆ.ಎಸ್.ಆರ್. ಟಿ. ಸಿ ಡಿಪೋ ವ್ಯವಸ್ಥಾಪಕರಿಗೆ ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ.ರ.ವೇ ನಗರ ಘಟಕ ಅಧ್ಯಕ್ಷರಾದ ಹೇಮಂತ್ ಗೌಡ, ಕಸಬಾ ಉಪಾಧ್ಯಕ್ಷರಾದ ಸುಜನ್ ಗೌಡ,ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷರಾದ ದೀಪಕ್,ಆಟೋ ಘಟಕ ಅಧ್ಯಕ್ಷರಾದ ಸ್ವಾಮಿ,ಕ.ರ.ವೇ ಕಾರ್ಯಕರ್ತರಾದ ದಿವಾಕರ ಗೌಡ,ಪ್ರಮೋದ,ಅನಂತ್ ಗೌಡ, ವಳಲಹಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ರುದ್ರೇಶ್, ಜಂಟಿ ಕಾರ್ಯದರ್ಶಿ ಗಿರೀಶ್ ಚಿನ್ನಹಳ್ಳಿ ಇದ್ದರು.
