
ಹೆತ್ತೂರು : ಕರ್ನಾಟಕ ಪಬ್ಲಿಕ್ ಶಾಲೆ ಹೆತ್ತೂರು ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವನ್ನು ಆಚರಿಸಲಾಯಿತು.
ಈ ಸಂಧರ್ಭ ದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕರಡಿಗಾಲ ಹರೀಶ್ ಮಾತನಾಡುತ್ತಾಶ್ರಾವಣ ಮಾಸದಲ್ಲಿ ಕೃಷ್ಣ ಪಕ್ಷದಲ್ಲಿ ಬರುವ ಅಷ್ಟಮಿ ದಿನ ಈ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಆಚರಿಸಲಾಗುತ್ತದೆ . ಶ್ರೀ ಕೃಷ್ಣನು ವಿಷ್ಣುವಿನ 10 ಅವತಾರಗಳಲ್ಲಿ 8ನೇ ಅವತಾರವಾಗಿ ಕೃಷ್ಣನಾಗಿ ವಸುದೇವ ಮತ್ತು ದೇವಕಿಯ ಮಗನಾಗಿ ಜನಿಸುತ್ತಾರೆ ಇವರನ್ನು ಯಶೋಧ ಎಂಬ ಸಾಕು ತಾಯಿ ಸಾಕುತ್ತಾರೆ. ಶ್ರೀ ಕೃಷ್ಣ ಅವರು ಧರ್ಮವನ್ನು ಎತ್ತಿ ಹಿಡಿಯುತ್ತಾರೆ ಎಂಬ ವಿಚಾರಗಳನ್ನು ತಿಳಿಸಿದರು .
ಕೃಷ್ಣ ಜನ್ಮಾಷ್ಟಮಿಗೆ ಎಲ್ಲಾ ಮಕ್ಕಳು ಕೃಷ್ಣ ರಾಧೆಯರ ತೊಡುಗೆಯನ್ನು ತೊಟ್ಟು ಸಂಭ್ರಮಿಸಿದರು ಜೊತೆಗೆ ಈ ಸಂಭ್ರಮಾಚರಣೆಯಲ್ಲಿ SDMC ಉಪಾಧ್ಯಕ್ಷರಾದಂತಹ ಸುಮಾ. ಸದಸ್ಯರುಗಳಾದ ಸುಷ್ಮಿತಾ,ಮನು ,ಶರತ್ ರವರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಮಂಜುನಾಥ್ ಸರ್ ಮುಖ್ಯ ಶಿಕ್ಷಕರಾದಂತಹ ಸತೀಶ್ ಸರ್ ಪ್ರೌಢಶಾಲಾ ವಿಭಾಗದಿಂದ ಮುದುಕಲಾ ಮೇಡಂ , ರಮ್ಯ ಮೇಡಂ ಹಾಗೂ ಪೋಷಕರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.




