
“ಉಚಿತ ಪಶು ಆರೋಗ್ಯ ಶಿಬಿರ”
ಸಣ್ಣಚಾಕನಹಳ್ಳಿ ಹಾಗೂ ದೊಡ್ಡ ಚಾಕನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ “ಉಚಿತ ಪಶು ಆರೋಗ್ಯ ಶಿಬಿರವನ್ನು” ಆಯೋಜಿಸಿದ್ದು .ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮುನಿಸ್ವಾಮಿ ಗೌಡ (ಡೀನ್ ಕೃಷಿ ಮಹಾವಿದ್ಯಾಲಯ ಕಾರೆಕೆರೆ ) ಡಾ.ಶಂಕರ .ಎಂ .ಎಚ್. (ಸಹಯೋಜಕರು, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ) ಡಾ. ವೇಣು .ಎಸ್ .ಎ (ಕೃಷಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರು)ಡಾ.ಸೌಮ್ಯ .ಈ .(ಕೃಷಿ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು) ಹಾಗೂ ಡಾ.ಶಿವಬಸಪ್ಪ ಕಂದಕೂರ್ . (ಕೃಷಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರು) ಡಾ.ನಾಗರಾಜು ಮತ್ತು ಡಾ. ಶಿವಕುಮಾರ್ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಪಶುಗಳಿಗೆ ಹುಳುನಾಶಕ ,ಸಾಮಾನ್ಯ ಆರೋಗ್ಯ ತಪಾಸಣೆ ,ಗರ್ಭಿಣಿ ಹಸುಗಳ ಆರೋಗ್ಯ ಪರಿಶೀಲನೆ ಮಾಡಲಾಯಿತು. ತಪಾಸಣೆಯ ವೇಳೆ ಪಶುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ 1.ಜೀರ್ಣಕ್ರಿಯ ಸಮಸ್ಯೆಗಳು
2.ಪೋಷಕಾಂಶ ಕೊರತೆ ಹಾಗೂ ಲಸಿಕೆಗಳ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ಈ ಶಿಬಿರದಲ್ಲಿ ರೈತರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪಶುಗಳಿಗೆ ತಪಾಸಣೆ ಮಾಡಿಸಿಕೊಂಡು .ಪಶು ಪಾಲನೆಯಲ್ಲಿ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಕುರಿತು ತಜ್ಞರಿಂದ ಸಲಹೆ ಪಡೆದರು .
ಈ ಶಿಬಿರದಲ್ಲಿ ಪಿಜಿ ಮತ್ತು ಅಂತಿಮ ವರ್ಷದ ಪಶು ವೈದ್ಯಕೀಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡು ರೈತರಿಗೆ ಪಶು ಆರೋಗ್ಯ ಸೇವೆಯನ್ನು ನೀಡಿದರು.
ಈ ಮೂಲಕ ರೈತರೊಡನೆ ಉತ್ತಮ ಸಂವಾದದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು
