
ಸಕಲೇಶಪುರ : ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಲು ಬಾನು ಮುಷ್ತಾಕ್ ಆಯ್ಕೆಯಾಗಿರುವುದು ಖಂಡನೀಯ. ಇಸ್ಲಾಂ ಮತದಲ್ಲಿ ಅಲ್ಲಾ ಬಿಟ್ಟರೆ ಬೇರೆ ಯಾರು ದೇವರಿಲ್ಲ ಎನ್ನುತ್ತದೆ. ಆದರೆ ಮೈಸೂರಿನ ತಾಯಿ ಚಾಮುಂಡೇಶ್ವರಿಯನ್ನು ಬಾನು ಮುಷ್ತಾಕ್ ಹೇಗೆ ಒಪ್ಪುತ್ತಾರೆ.
ಹಿಂದೂಗಳ ಧಾರ್ಮಿಕ ನಂಬಿಕೆ ಪ್ರತೀಕವಾಗಿ ನಡೆಸುವ ದಸರಾ ನಮ್ಮ ಹಿಂದೂಗಳ ಆಚರಣೆ. ಹಿಂದೂ ಶ್ರದ್ಧಾ ಭಾವನೆಗಳ ಮೇಲೆ ನಂಬಿಕೆ ಇಲ್ಲದ ಇಸ್ಲಾಂನ ಬಾನು ಮುಷ್ತಾಕ್’ಗೆ ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವುದಕ್ಕೆ ನಮ್ಮ ವಿರೋಧವಿದ್ದು ತಕ್ಷಣ ಸರ್ಕಾರ ಈ ನಿರ್ಧಾರವನ್ನು ಕೈ ಬಿಡುವಂತೆ ಈ ಮೂಲಕ ಆಗ್ರಹ ಪಡಿಸುತ್ತಿದ್ದೇವೆ ಎಂದು ಪ್ರತಿಭಟನೆಕಾರರು ವಿರೋಧಿಸಿದ್ದಾರೆ.
ಮುಸ್ಲಿಂ ಓಲೈಕೆಗೆ ಸರ್ಕಾರ ಮುಂದಾಗಿದ್ದು ದಸರಾ ಸಂಪ್ರದಾಯವನ್ನ ಮುರಿಯುತ್ತಿರುವ ಸರ್ಕಾರದ ನಿಲುವನ್ನು ಹಿಂದೂ ಸಮಾಜ ಎಂದಿಗೂ ಒಪ್ಪುವುದಿಲ್ಲ ಎಂದು ರಘು ಸಕಲೇಶಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸರ್ಕಾರದ ಹಿಂದೂ ವಿರೋಧಿ ಧೋರಣೆ ಮಿತಿಮೀರಿದ್ದು ಭಾನು ಮುಸ್ತಾಕ್ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರೋದು ಕೋಟ್ಯಂತರ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ
ಪ್ರತಿಭಟನೆಯಲ್ಲಿ ಹಿಂದೂ ಹಿತರಕ್ಷಾಣ ವೇದಿಕೆ ಸಂಚಾಲಕ ಶಿವೂ ಜಿಪ್ಪಿ ಹಿಂದೂ ಹಿತರಕ್ಷಾಣ ವೇದಿಕೆ ವಿದ್ಯಾರ್ಥಿ ಪ್ರಮುಖ್ ಜತಿನ್, ವೀಜಿತ್ ರಾಮದೂತ ಗಣಪತಿ ಅಧ್ಯಕ್ಷರಾದ ಪ್ರದೀಪ್ ಪೂಜಾರಿ, ಧರ್ಮೇಶ್ ಉಪಸ್ಥಿತಿ ಇದ್ದರು.
