ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಬೆಂಬಲಿಗರೊಂದಿಗೆ ಯಾತ್ರೆಯಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ 200ಕ್ಕೂ ಹೆಚ್ಚು ಕಾರುಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರೆ ನಡೆಸಿದ ಮೈಸೂರು ಜಿಲ್ಲೆ ಕೆ ಆರ್ ನಗರ ಶಾಸಕ ಸಾರಾ ಮಹೇಶ್ ಹೊಳೆನರಸೀಪುರ ಅರಕಲಗೂಡು ಶನಿವಾರ ಸಂತೆ ಬಿಸಿಲೆ ಘಾಟ್ ಮೂಲಕ ಧರ್ಮಸ್ಥಳ ತಲುಪಿದ್ದು ಮಾರ್ಗ ಮಧ್ಯೆ ಮಾತನಾಡಿದ ಅವರು.

ಹಿಂದೂ ಧರ್ಮದ ಪವಿತ್ರ ಕ್ಷೇತ್ರವಾದ ಈ ಧರ್ಮಸ್ಥಳ ಮಂಜುನಾಥೇಶ್ವರ ಸಮಸ್ತ ಕರ್ನಾಟಕ ಹಿಂದುಗಳ ಪುಣ್ಯಕ್ಷೇತ್ರವಾಗಿದ್ದು ಇಂತಹ ಕ್ಷೇತ್ರಕ್ಕೆ ಕೆಲವರಿಂದ ಕಪ್ಪು ಚುಕ್ಕೆ ಬರುತ್ತಿದ್ದು ಈ ಬಗ್ಗೆ ಸಮಸ್ತ ಹಿಂದೂ ಸಮಾಜದ ಬಾಂಧವರು ಒಗ್ಗಟ್ಟಾಗಿ ಧರ್ಮದ ಪರ ನಿಲ್ಲುವ ಸಮಯ ಇದಾಗಿದೆ ಎಂದು ತಿಳಿಸಿದರು

ಇದೇ ವೇಳೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ ಕರ್ನಾಟಕದ ಸಮೃದ್ಧ ಅಭಿವೃದ್ಧಿ ರೈತರ ಪರ ನಿಲುವು ತೆಗೆದುಕೊಳ್ಳುವ ಏಕೈಕ ಪಕ್ಷವಾಗಿದ್ದು. ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಪಣತೊಟ್ಟವರಂತೆ ಕೆಲ ನಾಯಕರು ವರ್ತಿಸುತ್ತಿದ್ದು ಇದು ಸಾಧ್ಯವಿಲ್ಲ ಎಂದು ತಿಳಿಸಿದರು

ಜೆಡಿಎಸ್ ಪಕ್ಷ ಲಕ್ಷಾಂತರ ಪ್ರಾಮಾಣಿಕ ಕಾರ್ಯಕರ್ತರ ಶಕ್ತಿಯಿಂದ ನೆಲೆಸಿದ್ದು ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದ್ದು ರಾಜ್ಯದ ಯಾವೊಬ್ಬ ಜೆಡಿಎಸ್ ಕಾರ್ಯಕರ್ತನು ಕುಗ್ಗುವ ಪ್ರಶ್ನೆಯೇ ಇಲ್ಲ ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದದೊಂದಿಗೆ ರಾಜ್ಯದ ಎಲ್ಲಾ ಜೆಡಿಎಸ್ ಮುಖಂಡರು ಒಗ್ಗಟ್ಟಿನಿಂದ. ಪಕ್ಷ ಸಂಘಟಿಸುತ್ತಿದ್ದು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು

ಇದೇ ವೇಳೆ ಮೈಸೂರು ವಿಧಾನ ಪರಿಷತ್ ಸದಸ್ಯ ಮಹಾದೇವ್ ಮಂಡ್ಯ ಎಂ ಎಲ್ ಸಿ ವಿವೇಕ್ ಮಾಜಿ ಸಂಸದ ಪುಟ್ಟರಾಜ್ ಜೆಡಿಎಸ್ ಮುಖಂಡ ಮತ್ತು ವನಗೂರು ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೌಶಿಕ್ ಗೊದ್ದು ಜೆಡಿಎಸ್ ಮುಖಂಡರಾದ. ಹೆತ್ತೂರು ಸುಮನ್ ಹೆತ್ತೂರು ಕೃಷಿ ಸಹಕಾರ ಬ್ಯಾಂಕಿನ ಅಧ್ಯಕ್ಷ ನಾಗಭೂಷಣ್ ಹೆತ್ತೂರು ಗ್ರಾಮ ಪಂಚಾಯತಿ ಸದಸ್ಯ ಮಲ್ಲೇಶ್. ವನಗೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾರಾಯಣ ಪೂಜಾರಿ ಕಿರ್ಕಳ್ಳಿ. ಮಲ್ಲೇಶ್ ವಣಗೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ರಹ್ಮಣ್ಯ ಇಜ್ಜನಹಳ್ಳಿ ಸುಧೀರ್. ಸಕಲೇಶಪುರ ತಾಲೂಕು ಮಾಜಿ ಅಧ್ಯಕ್ಷ ಸುಜಾತ ಮಲ್ಲೇಶ್ ಜೆಡಿಎಸ್ ನೂರಾರು ಕಾರ್ಯಕರ್ತರು ಉಪಸಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *