ಆಲೂರು : ಧರ್ಮಸ್ಥಳದಲ್ಲಿ ಷಡ್ಯಂತರ ಮಾಡುತ್ತಿರುವ ವರ ವಿರುದ್ಧ ಕ್ರಮ ಕೈಗೊಳ್ಳಬೇಕು!! ಧರ್ಮಸ್ಥಳದ ಅಪಪ್ರಚಾರ ಮಾಡಿದವರು ವಿರುದ್ಧ ರಣಕಹಳೆಯನ್ನು ಮುಳುಗಿಸುವುದಕ್ಕೆ ಮುಂದಾಗಿರುವಂತದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರಿಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ರುಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು,

ನುರಾರು ಸಂಖ್ಯೆಯಲ್ಲಿ ವೀರಶೈವ ಕಲ್ಯಾಣ ಮಂಟಪದಿಂದ ಹಿಡಿದು ತಾಲೂಕು ಕಚೇರಿಯವರಿಗೆ ಕಾಲ್ನಡಿಗೆ ಜಾತದ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು, ಇದು ಧಾರ್ಮಿಕ ಭಾವನೆಗಳ ಭಾವೈಕ್ಯತೆಯ ಕ್ಷೇತ್ರವಾಗಿದ್ದು, ಕ್ಷೇತ್ರ ಧರ್ಮಸ್ಥಳ ಹೆಸರಿಗೆ ಕಳಂಕ ತರಬೇಕೆಂದು ಕೆಲ ಕಿಡಿಗೇಡಿಗಳು ಮತ್ತು ರಾಜ್ಯ ಸರ್ಕಾರ ಪಿತ್ತೂರಿ ಮಾಡುತ್ತಿದೆ, ಇದು ಸನಾತನ ಧರ್ಮ ಲಕ್ಷಾಂತರ ವರ್ಷಗಳಿಂದ ಬಂದಿರತಕ್ಕಂತು, ಧರ್ಮದ ವಿಚಾರಕ್ಕೆ ಕೈ ಹಾಕಿದರೆ ಕಿಡಿಕೇಡಿಗಳಲ್ಲ ಸರ್ಕಾರ ಇನ್ನು ಆರು ತಿಂಗಳಲ್ಲಿ ಉಳಿಯುವುದಿಲ್ಲ, ಎಸ್ಐಟಿಯಿಂದ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ಮಾಡುತ್ತಿರುವ ಕಿಡಿಕೇಡಿಗಳು ವಿರುದ್ಧ ಸತ್ಯ ಸತ್ಯತೆ ಹೊರಗೆ ಬರಲಿ, ಆದಷ್ಟು ಶೀಘ್ರವಾಗಿ ಕಿಡಿಕಿಡಿಗಳ ವಿರುದ್ಧ ಕಾನೂನು ಕ್ರಮ ವಹಿಸಬೇಕು, ಧರ್ಮಸ್ಥಳ ಎಂಬುವುದು ಭಾವೈಕ್ಯತೆಗೆ ಧಕ್ಕೆ ತರುವವರ ಯಾರಾದರೂ ಸಹ ಉಳಿಗಾಲ ಇರುವುದಿಲ್ಲ ಎಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್ ಕಿಡಿಕಾರಿದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *