ಸಕಲೇಶಪುರ : ಪಟ್ಟಣದ ಹಾಡ್ಯ ಸುಬ್ಬೇಗೌಡರ ಪುರಭವನದಲ್ಲಿ ಶ್ರೀ ಗಣಪತಿ ಸೇವಾ ಸಮಿತಿಯು ಆಯೋಜಿಸಿದ್ದ 64ನೇ ವರ್ಷದ ಶ್ರೀ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಹೋತ್ಸವ ಅಂಗವಾಗಿ ತಾಲೂಕಿನ ಕೌಡಹಳ್ಳಿ ಗ್ರಾಮದ ಎನ್.ಕೆ. ಹಾರ್ಲೆ ಗಣಪಯ್ಯ ವಿಕಲಚೇತನರ ಶಾಲೆ ವಿದ್ಯಾರ್ಥಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಸ್ ಡಿ ಸತೀಶ್, ಹಾರ್ಲೆ ಗಣಪಯ್ಯ ನಿರ್ಮಾಣ ಮಾಡಿದ ವಿಕಲಚೇತನರ ಶಾಲೆ ಹಲವು ವರ್ಷಗಳಿಂದ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ವಿಕಲಚೇತನರ ಬಾಳಿಗೆ ಬೆಳಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ರೋಟರಿ ಶಾಲೆಯ ಅಧ್ಯಕ್ಷ ಸ್ವಾಮಿ, ರೋಟರಿ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ವಿಜಯ ಶಂಕರ್, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ರವಿಕುಮಾರ್, ಸಹನಾ ಶಶಿಧರ್ ಗಣಪತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಸೂರ್ಯ, ಬಿ.ಎನ್. ನಾಗೇಶ್, ಉಪಾಧ್ಯಕ್ಷರಾದ ತಿಲಕ್ ಶೆಟ್ಟಿ, ಚಂದ್ರಶೇಖರ್ (ದರ್ಶನ್ ಶೇಖರ್), ಸಹ ಕಾರ್ಯದರ್ಶಿಗಳಾದ ರಾಜ್‌ಕುಮಾರ್ ಗುಲಗಳಲೆ, ಚಂದ್ರಶೇಖರ್ ಶೆಟ್ಟಿ (ಆನೆಮಹಲ್ ಶೇಕು) ಸತ್ಯ ಹಾಗೂ ಗೌರವ ಸಲಹೆಗಾರರು ಮತ್ತು ಸದಸ್ಯರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *