
ಹಾಸನ : ಜಿಲ್ಲಾ ರಾಣಿಯರ ಸಮಾಜ ಸೇವ ಸಂಘ ಹಾರ್ಲೆ ಕೂಡಿಗೆ ಸಕಲೇಶಪುರ ತಾಲೂಕು ಇವರ ವತಿಯಿಂದ ಸಕಲೇಶಪುರ ತಾಲ್ಲೂಕಿನ ಕೌಡಳ್ಳಿ ಗ್ರಾಮದಲ್ಲಿರುವ ಶ್ರವಣದೋಷವುಳ್ಳ ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಹಿ ತಿಂಡಿ ಹಣ್ಣು ಹಂಪಲು ಮತ್ತು ದಿನಸಿ ಪದಾರ್ಥಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮೋನಪ್ಪ ರವರು ಉಪಾಧ್ಯಕ್ಷರು ಕೇಶವ ಕಾರ್ಯದರ್ಶಿಯಾದ ಶಿವಣ್ಣ ಖಜಂಚಿ ಸತೀಶ್ ಮತ್ತು ಸದಸ್ಯರುಗಳಾದ ಮಂಜುನಾಥ್ ಸಂಕಪ್ಪ,ರೋಹಿತ್, ನಾಗೇಶ್, ಚಂದ್ರಶೇಖರ, ಯಶವಂತ್, ಶ್ರೀನಾಥ್ರ,ಮೇಶ್ಸು,ರೇಂದ್ರ ಗೋಪಾಲ, ಯಶೋಧ, ಜಯ ಕಮಲ, ಶೈಲ ರಮೇಶ್ ಮತ್ತು ಈ ಶಾಲೆಗೆ ಇನ್ನೂ ಹೆಚ್ಚಿನ ಸಹಾಯ ಮಾಡೋದಾಗಿ ಅಧ್ಯಕ್ಷರವರು ತಿಳಿಸಿರುತ್ತಾರೆ.

