
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ ಯವರು ಸಕಲೇಶಪುರದ ಕೌಡಹಳ್ಳಿಗೆ ಭೇಟಿ ನೀಡಿ ಕೌಡಹಳ್ಳಿ ಘಟಕವನ್ನು ಉದ್ಘಾಟನೆ ಮಾಡಿ, ಘಟಕದ ಅಧ್ಯಕ್ಷರಾಗಿ ಗಿರೀಶ್ ರವರನ್ನು ಆಯ್ಕೆಮಾಡಿ ಕನ್ನಡ ಭಾವುಟ ನೀಡುವುದರೊಂದಿಗೆ ಸಂಘಟನೆಯ ಜವಾಬ್ದಾರಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಕೌಡಹಳ್ಳಿ ಹಾಗೂ ಸುತ್ತಮುತ್ತಲಿನ ಹಲವಾರು ಯುವಕರು ಹಾಗೂ ಗ್ರಾಮಸ್ಥರು ಮಲೆನಾಡು ರಕ್ಷಣಾ ಸೇನೆಗೆ ಸೇರ್ಪಡೆಯಾದರು.
ಹಾಸನ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು ಸಕಲೇಶಪುರ ತಾ.ಉಪಾಧ್ಯಕ್ಷರಾದ ತೇಜೇಶ್ ತಾ.ಉಸ್ತವಾರಿ ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು,ಕೌಡಹಳ್ಳಿ ಗ್ರಾಮಸ್ಥರು ಈ ಸಂಧರ್ಭದಲ್ಲಿ ಹಾಜರಿದ್ದರು.
