ಬ್ರಹ್ಮಶ್ರೀ ನಾರಾಯಣ ಗುರು ಆದರ್ಶ ಪಾಲಿಸಿ’- ಶಾಸಕ ಸಿಮೆಂಟ್ ಮಂಜು.

ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳ ಗೈರು : ಆಕ್ರೋಶ ವ್ಯಕ್ತಪಡಿಸಿದ ಸಮುದಾಯದ ಮುಖಂಡರು

ಸಕಲೇಶಪುರ: ಸಮಾಜ ಸುಧಾರಣೆಗಾಗಿ ಹೋರಾಟ ಮಾಡಿದ್ದ ನಾರಾಯಣ ಗುರುಗಳ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಭಾನುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಪೀಳಿಗೆಗೆ ನಾರಾಯಣ ಗುರುಗಳ ಮಾರ್ಗದರ್ಶನ ಅತ್ಯಗತ್ಯ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿ ಆಗಬೇಕು.ಜಾತಿ, ಧರ್ಮ, ವರ್ಣ ಬೇಧವಿಲ್ಲದೆ ಎಲ್ಲರೂ ಸಮಾನರೆಂದು ಬೋಧಿಸಿದ ನಾರಾಯಣ ಗುರು ಅವರ ತತ್ವಗಳು ಇಂದಿಗೂ ಸಮಾನ ಪ್ರಸ್ತುತತೆಯನ್ನು ಹೊಂದಿವೆ. ಸಮಾಜದಲ್ಲಿ ಸಮಾನತೆ, ಶಿಕ್ಷಣ ಮತ್ತು ಸ್ವಾಭಿಮಾನ ಬೆಳೆಸುವ ಕೆಲಸದಲ್ಲಿ ಅವರು ಮಾಡಿದ ಶ್ರಮ ನಮಗೆ ದಾರಿದೀಪವಾಗಿದೆ” ಎಂದು ಹೇಳಿದರು.

ಸಮುದಾಯದವರ ಬೇಡಿಕೆಯಂತೆ ಇತರೆ ನಾಯಕರುಗಳ ಜಯಂತಿಯ ದಿನದಂದು ಸಾರ್ವತ್ರಿಕ ರಜೆ ನೀಡುತ್ತಿದ್ದು ಅದರಂತೆ ನಾರಾಯಣಗುರು ರವರ ಜಯಂತಿ ದಿನದಂದು ರಜೆ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದು ಈ ಕುರಿತಂತೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸುತ್ತೇನೆ ಅದೇ ರೀತಿ ತಾಲೂಕಿನಲ್ಲಿ ಬಿಲ್ಲವ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.

ಸಮುದಾಯ ತಾಲೂಕು ಅಧ್ಯಕ್ಷ ಭಾಸ್ಕರ್ ಮಾತನಾಡಿ, ನಾರಾಯಣ ಗುರುರವರು ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ ಸಮಾಜದಲ್ಲಿರುವ ಅಸ್ಪೃಶ್ಯತೆ ವಿರುದ್ಧ ಹೋರಾಡಿದವರು. ರಾಜ್ಯದ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ನಾರಾಯಣ ಗುರುಗಳ ಪುತ್ತಳಿ ನಿರ್ಮಾಣವಾಗಿದ್ದು ತಾಲೂಕಿನಲ್ಲಿಯೂ ನಾರಾಯಣ ಗುರುಗಳ ಪುತ್ತಳಿ ನಿರ್ಮಾಣ ಕಾರ್ಯಕ್ಕೆ ಶಾಸಕರು ಮುಂದಾಗಬೇಕೆಂದು ಮನವಿ ಮಾಡಿದರು.

ಈ ವೇಳೆ ಕುನಿಗನಹಳ್ಳಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಗೋಪಿನಾಥ್,ಕರವೇ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಯವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಉಪ ತಹಸೀಲ್ದಾರ್ ಮೋಹನ್, ತಾಲೂಕು ಚುನಾವಣಾ ಶಿರಸ್ತೆದಾರ್ ಶ್ವೇತ, ತಾಲೂಕು ಪಶು ವೈದ್ಯಾಧಿಕಾರಿ ವೆಂಕಟೇಶ್,ಸಮುದಾಯದ ಮುಖಂಡರಾದ ಉಮಾನಾಥ್ ಸುವರ್ಣ,ಸಮುದಾಯದ ಮಹಿಳಾ ಘಟಕದ ಅಧ್ಯಕ್ಷೆ ಕವಿತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *