
ಹೆತ್ತೂರು ಪಿಯು ಕಾಲೇಜಿನ ಕು.ಸಿಂಚನ ಕ್ರೀಡಾಕೂಟದಲ್ಲಿ ವೈಯುಕ್ತಿಕ ಚಾಂಪಿಯನ್.
ಸಕಲೇಶಪುರ:- 2025- 26ನೇ ಸಾಲಿನ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹೆತ್ತೂರು ಪಿಯು ಕಾಲೇಜಿನ ಕು.ಸಿಂಚನ ವೈಯುಕ್ತಿಕ ಚಾಂಪಿಯನ್ ಆಗಿ ಹೊರಹೋಮ್ಮಿದ್ದಾರೆ.
ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ಭರ್ಜಿ ಎಸೆತದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರು.
ಕಾಲೇಜಿನ ಇತರೆ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು ಕಾಲೇಜು ಹೆಚ್ಚು ಪ್ರಶಸ್ತಿ ತಂದು ಕೊಟ್ಟಿದ್ದಾರೆ.
ಬಾಲಕಿಯ ವಿಭಾಗದಲ್ಲಿ: 3000, 1500 ಮೀಟರ್ ಓಟದಲ್ಲಿ ಪ್ರಥಮ, ಉದ್ದ ಜಿಗಿತ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, 4×100 ಓಟ ಪ್ರಥಮ, ಹ್ಯಾಮರ್ ಥ್ರೋ ದ್ವಿತೀಯ ಮತ್ತು ತೃತೀಯ, 800 ಮೀಟರ್ ಓಟ ದ್ವಿತೀಯ ಹಾಗೂ ತೃತೀಯ, 100 ಮೀಟರ್ ಓಟ ತೃತೀಯ, 400 ಮೀಟರ್ ಓಟ ದ್ವಿತೀಯ, ಖೋ ಖೋ ದ್ವಿತೀಯ, ಟೆನ್ನಿಕಾಯ್ಟ್ ದ್ವಿತೀಯ.
ಬಾಲಕರ ವಿಭಾಗದಲ್ಲಿ: ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಟೆನ್ನಿಕಾಯ್ಟ್ ಪ್ರಥಮ, ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ದ್ವಿತೀಯ. ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಬಿ.ಡಿ.ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದರು.
