ಸಕಲೇಶಪುರ: ತಾಲೂಕಿನ ಬಾಗೆ ಸಮೀಪದ ಗ್ರಾಮವೊಂದರ ಕ್ರೆಸ್ತ ಜನಾಂಗದ ವ್ಯಕ್ತಿಯೋರ್ವರು ಮೃತಪಟ್ಟಿದ್ದು ಈ ಸಂರ್ಧಭದಲ್ಲಿ ಇವರ ಅಂತ್ಯ ಕ್ರಿಯೆಯನ್ನು ಬಾಗೆ ಗ್ರಾಮದ ಪರಿಶಿಷ್ಟ ಜಾತಿ ಮಹಿಳೆ ಸರೋಜಮ್ಮ ಎಂಬುವರ ಮನೆಯ ಮುಂಭಾಗವೇ ಮನೆಯವರ ತೀವ್ರ ವಿರೋಧದ ನಡುವೆ ಪೋಲಿಸರ ಬಿಗಿ ಬಂದೋಬಸ್ತ್ ನಲ್ಲ್ಲಿ ಮಾಡಲಾಗಿದೆ.

*ಘಟನೆಯ ವಿವರ*: ತಾಲೂಕಿನ ಬಾಗೆ ಗ್ರಾಮದಲ್ಲಿ ಕ್ರೈಸ್ತರ ಸ್ಮಶಾನವೊಂದಿದ್ದು ರಾಷ್ಟ್ರೀಯ ಹೆದ್ದಾರಿ 75 ಚತುಷ್ಫಥ ರಸ್ತೆ ಹಾದುಹೋಗಿದ್ದರಿಂದ ಸ್ಮಶಾನದ ಜಾಗ ಸಂಪೂರ್ಣ ಕಡಿಮೆಯಾಗಿ 4 ಭಾಗಗಳಾಗಿ ತುಂಡಾಗಿದೆ. ಹೆದ್ದಾರಿಯ ಒಂದು ಭಾಗದಲ್ಲಿ ಸರೋಜಮ್ಮ ಎಂಬ ಪರಿಶಿಷ್ಟ ಜಾತಿ ಮಹಿಳೆ ಯ ಕುಟುಂಬದವರು ಮನೆ ಮಾಡಿಕೊಂಡು ಹಲವಾರು ವರ್ಷಗಳಿಂದ ವಾಸವಿದ್ದು ಮನೆಯ ಮುಂಭಾಗ ಕ್ರೈಸ್ತರ ಸ್ಮಶಾನಕ್ಕೆ ಸೇರಿರುವ ಜಾಗ ಕಡಿಮೆ ಉಳಿದಿರುತ್ತದೆ.

ಇದು ಕ್ರೈಸ್ತರ ಸಮುದಾಯಕ್ಕೆ ಸೇರಿರುವ ಸ್ಮಶಾನವಾದರೂ ಸಹ ಮಾನವೀಯತೆಯನ್ನು ಮರೆತು ಪೋಲಿಸರ ಸಮ್ಮುಖದಲ್ಲಿ ಶುಕ್ರವಾರ ಮನೆಯ ಮುಂಭಾಗವೇ ಮೃತರ ಅಂತ್ಯಕ್ರಿಯೆ ಮಾಡಲಾಗಿದೆ.

ಮನೆಯಲ್ಲಿ ಮಹಿಳೆಯರು , ಪುಟಾಣಿ ಮಕ್ಕಳಿದ್ದು ಇದೀಗ ದಿನನಿತ್ಯ ಆತಂಕದಲ್ಲೆ ಮನೆಯಲ್ಲಿ ಇರಬೇಕಾಗಿದೆ. ಕೂಡಲೆ ಕ್ರೈಸ್ತರ ಕ್ರೈಸ್ತರ ಸ್ಮಶಾನಕ್ಕೆ ಬೇರೆಡೆ ಜಾಗ ನೀಡಿ ಮನೆಯವರಿಗೆ ನ್ಯಾಯ ಒದಗಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡಬೇಕಾಗಿದೆ. 12ಎಸ್.ಕೆ.ಪಿ.ಪಿ 3 ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ವ್ಯಕ್ತಿಯೊರ್ವರ ಅಂತ್ಯ ಸಂಸ್ಕಾರ ಕುರಿತು ಎರಡು ಗುಂಪುಗಳ ನಡುವೆ ಮಾತಿನ ಚಕಾಮುಖಿ ನಡೆದಿರುವುದು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *