ಹಾಸನ ತಾಲ್ಲೂಕಿನ ಕೆ. ಬ್ಯಾಡರಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ RAWEP (ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ) ವಿದ್ಯಾರ್ಥಿಗಳಿಂದ ಜೇನು ಕೃಷಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜೇನು ಸಾಕಾಣಿಕೆ ಕೃಷಿಕರಿಗೆ ಪೂರಕ ಉದ್ಯಮವಾಗಿ ನೀಡುವ ಲಾಭಗಳ ಬಗ್ಗೆ ಹಾಗೂ ಜೇನು ಕೃಷಿ ಅಭ್ಯಾಸದ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಮಾರ್ಗಗಳ ಕುರಿತು ಮಾಹಿತಿ ನೀಡಲಾಯಿತು.

ಜೇನು ಸಾಕಾಣಿಕೆಗೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗುತ್ತಿರುವ ವಿವಿಧ ಸರ್ಕಾರದ ಯೋಜನೆಗಳು, ತರಬೇತಿ ಅವಕಾಶಗಳು ಮತ್ತು ಅನುಷ್ಠಾನ ವಿಧಾನಗಳ ಬಗ್ಗೆ ವಿವರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಾದ ಡಾ. ಸಹನಾ ಎಂ, ಸಹಾಯಕ ಪ್ರಾಧ್ಯಾಪಕಿ, ಕೀಟಶಾಸ್ತ್ರ ವಿಭಾಗ, ರೈತರಿಗೆ ಜೇನು ಸಾಕಾಣಿಕೆಯ ತಾಂತ್ರಿಕ ವಿಷಯಗಳು, ಮಾರುಕಟ್ಟೆ ಅವಕಾಶಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಇದರ ಮಹತ್ವವನ್ನು ವಿವರಿಸಿದರು.

ಸ್ಥಳೀಯ ರೈತರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹೆಚ್ಚಿನ ಮಾಹಿತಿ ಪಡೆದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *