ಸಕಲೇಶಪುರ : ದಿನಾಂಕ 16.09.2025 ರಂದು ನಡೆದ ಜೇನು ಪೋಷಕರ ಸಹಕಾರ ಸಂಘದ 2024 -25 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ವಿಷಯ ತಿಳಿಸಲಾಯಿತು,

ಪಟ್ಟಣದ ಶ್ರೀಮತಿ ಗಂಗಮ್ಮ ಶ್ರೀ ಲಕ್ಷ್ಮೇಗೌಡ ಒಕ್ಕಲಿಗ ರ ಸಮುದಾಯ ಭವನದಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ H.C. ಸುರೇಂದ್ರ ರವರು ತಮ್ಮ ಭಾಷಣದಲ್ಲಿ ಈ ವಿಷಯ ತಿಳಿಸಿದ್ದಾರೆ. ಹಾಗೂ ಉಪಾಧ್ಯಕ್ಷರಾದ H. S. ಕೃಷ್ಣೇಗೌಡ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಉದಯ ಕುಮಾರ್ ಸಭಿಕರನ್ನು ಸ್ವಾಗತಿಸಿದರು, ಹಾಗೂ ಶ್ರೀ S. ಸತೀಶ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಘದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು,

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ H. C. ಸುರೇಂದ್ರ ಹಾಗೂ ಮಾಜಿ ಉಪಾಧ್ಯಕ್ಷರಾದ S. B. ಕೃಷ್ಣೇಗೌಡರಿಗೆ ಸನ್ಮಾನಿಸಲಾಯಿತು. ಸಂಘದಿಂದ ನೀಡುವ ಸದಸ್ಯರ ಮಕ್ಕಳು S. S. L. C ಪರೀಕ್ಷೆ ಯಲ್ಲಿ ಅತ್ಯಾಧಿಕ ಅಂಕ ಪಡೆದವರಿಗೆ ಶಿಕ್ಷಣ ಪ್ರೋತ್ಸಾಹ ಧನ ಕುಮಾರಿ ಇಂಧುಶ್ರೀ ಅವರಿಗೆ ನೀಡಲಾಯಿತು.

ಮಾಜಿ ಅಧ್ಯಕ್ಷರಾದ H. C. ಸುರೇಂದ್ರ ರವರು ಹಾಲಿ ಅಧ್ಯಕ್ಷರಾದ ಜೈ ಮಾರುತಿ ದೇವರಾಜ್ ಅನಾರೋಗ್ಯದ ಕಾರಣ ಅಧ್ಯಕ್ಷರ ಭಾಷಣ ಮಾಡಿದರು.

ಸಂಘದ ನಿರ್ದೇಶಕರಾದ ಶ್ರೀ M. L. ಬಸವರಾಜ್ ಅವರು ವಂದನಾರ್ಪಣೆ ಸಲ್ಲಿಸಿದರು, ಸಭೆಯಲ್ಲಿ ಉಪಾಧ್ಯಕ್ಷರಾದ H. S. ಕೃಷ್ಣೇಗೌಡ ನಿರ್ದೇಶಕರು ಗಳಾದ S. B. ಕೃಷ್ಣೇಗೌಡ, K. P. ಶಶಿಶೇಖರ್, N. K. ವಿಕ್ರಮ್, H. C. ಹೇಮಂತ್, U. M. ಜಯರಾಮ್, B. B. ಸುಂದರಮ್ಮ, ಲತಾ ಬಸವರಾಜ್, J. S. ಈರಯ್ಯ, V. R. ನಾಗೇಶ್, ವಸಂತ, D. S. ಬಾಬು ಸಭೆಯಲ್ಲಿ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *