
ಸಕಲೇಶಪುರ : ನಗರದಲ್ಲಿ ವಾಯು ವಿಹಾರಕ್ಕೆ ಇರುವ ಏಕೈಕ ವಾಕಿಂಗ್ ಪಾತ್ ಎಂದರೆ ಅದು ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಸುಮಾರು 750 ಮೀಟರ್ ಸುತ್ತಳತೆಯ ದೊಡ್ಡಕೆರೆ ಆವರಣ ಆದರೆ ಅದೀಗ ಮಳೆ ನೀರು ಕೆರೆಗೆ ಬರುವಂತೆ ಭೂಮಿಯ ಅಡಿ ಭಾಗದಲ್ಲಿ ಅಳವಡಿಸಿರುವ ದೊಡ್ಡಗಾತ್ರದ ಪೈಪ್‌ನ ಒಳಭಾಗದಲ್ಲಿ ನೀರು ಅರಿವ ಪರಿಣಾಮ ಮಣ್ಣು ಕೊಚ್ಚಿ ಹೋಗಿದ್ದು ಇದೀಗ ವಾಕಿಂಗ್ ಪಾತ್‌ನ ಮೇಲ್ಭಾಗದಲ್ಲಿ ಅಳವಡಿಸಿರುವ ಇಂಟರ್ಲಾಕ್ ದೊಡ್ಡ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ
ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವಾಕಿಂಗ್ ಮಾಡಲು ಬರುತ್ತಾರೆ ಆದರೆ ವಾಕಿಂಗ್ ಮಾಡುವ ಈ ಸ್ಥಳ ತಳಭಾಗದಲ್ಲಿಗುಂಡಿ ಬಿದ್ದ ಪರಿಣಾಮ ಅನಾಹುತ ಸಂಭವಿಸಿ ಕೈ ಕಾಲು ಮುರಿಯುವ ಸಾಧ್ಯತೆ ಹೆಚ್ಚಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಆದಷ್ಟು ಬೇಗ ದುರಸ್ತಿ ಮಾಡಬೇಕೆಂದು ದೊಡ್ಡಕೆರೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ರವಿ ಮನವಿ ಮಾಡಿದ್ದಾರೆ.
