ಸಕಲೇಶಪುರ : ದಿನಾಂಕ 18/09/25 ರಂದು ಸಕಲೇಶಪುರದ ಹಳೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಅಡ್ಡಾದಿಡ್ಡಿ ಅಂಗಡಿಯನ್ನು ಹಾಕಿಕೊಂಡು ತರಕಾರಿ ಮತ್ತು ಸೊಪ್ಪು ಮಾರಾಟ ಮಾಡುತ್ತಿದ್ದ ಬಾಳೆಗದ್ದೆ ನಿವಾಸಿ ಹಯಾತ್ ಖಾನ್ ಗೆ. ನ್ಯಾಯಾಲಯವು ದಿನಾಂಕ 19/09/25 ರಂದು ಹಯಾತ್ ಖಾನ್ ಎಂಬ ವ್ಯಕ್ತಿಗೆ ದಂಡದ ರೂಪವಾಗಿ 4 ದಿನಗಳ ಕಾಲ ಪ್ರತಿದಿನ 2 ಗಂಟೆಗಳ ಕಾಲ ಸಕಲೇಶಪುರ ನಗರ ಪೊಲೀಸ್‌ ಠಾಣೆಯಲ್ಲಿ ಕಸ ಗುಡಿಸುವುದು ಮತ್ತು ಸ್ವಚ್ಚತೆಯನ್ನು ಮಾಡಬೇಕೆಂದು ನ್ಯಾಯಾಲಯವು ಆದೇಶಿಸಿರುತ್ತದೆ.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಕಲೇಶಪುರ ನಗರ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಪೊಲೀಸ್‌ ಅಧಿನಿಯಮ (K.P.Act) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಕಲೇಶಪುರದ ಸಿ.ಜೆ.ಎಂ& ಜೆಎಂಎಫ್ಟಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು, ಘನ ನ್ಯಾಯಾಲಯವು ದಿನಾಂಕ 19/09/25 ರಂದು ಈ ಆದೇಶ ಹೊರಡಿಸಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *