
ಅಕ್ಟೋಬರ್ 13 ರಿಂದ 17ರವರೆಗೆ ಮಧ್ಯ ಅಮೆರಿಕದ ಹೊಂಡುರಾಸ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಾಫಿ ಸಂಸ್ಥೆ (ಐಸಿಒ)ಯು ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಗ್ರೋಯರ್ಸ್ ಫೆಡರೇಶನ್ ಪ್ರತಿನಿಧಿಯಾಗಿ ಮಾಜಿ ಅಧ್ಯಕ್ಷರಾದ ಡಾ. ಎಚ್ ಟಿ ಮೋಹನ್ ಕುಮಾರ್ ರವರು ಭಾಗವಹಿಸಲಿದ್ದಾರೆ.
ಭಾರತದಿಂದ ಐಸಿಓ ಪ್ರತಿನಿಧಿಯಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಮಾರ್ಗವಾಗಿ ಇದೇ ತಿಂಗಳು ಸೆಪ್ಟೆಂಬರ್ 26ರಂದು ಪ್ರಯಾಣ ಬೆಳೆಸಿ ಹೊಂಡುರಾಸ್ ದೇಶದಲ್ಲಿ ಏಳನೇ ಸಿಇಓ ಹಾಗೂ ಜಾಗತಿಕ ನಾಯಕರ ಸಭೆಯಲ್ಲಿ ಡಾಕ್ಟರ್ ಮೋಹನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ
ಈ ಸಭೆಯಲ್ಲಿ ಕಾಫಿ ಉತ್ಪಾದಿಸುವ ರಾಷ್ಟ್ರಗಳ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುವ ವಿದ್ಯಮಾನಗಳ ಕುರಿತು ಕಾಫಿಯ ಭವಿಷ್ಯದ ಮಾರುಕಟ್ಟೆ ಸಂಬಂಧವಾಗಿ ಚರ್ಚೆಗಳು ನಡೆಯಲಿವೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಕಾರ್ಯದರ್ಶಿ ಸುರೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
