ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷರಾದ ಡಾ॥ಸಾಗರ್ ಜಾನೇಕೆರೆಯವರ ಅಧ್ಯಕ್ಷತೆಯಲ್ಲಿ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿಯವರು ಮಳಲಿ ಘಟಕವನ್ನು ಉದ್ಘಾಟನೆ ಮಾಡಿ ಘಟಕದ ಅಧ್ಯಕ್ಷರಾಗಿ ಗೌತಮ್ ರವರನ್ನು ಹಾಗೂ ಸಕಲೇಶಪುರ ನಗರ ಅಧ್ಯಕ್ಷರಾಗಿ ಧನ್ಯಕುಮಾರ್ (ಧನು ಮಳಲಿ) ರವರನ್ನು ಕನ್ನಡ ಭಾವುಟ ನೀಡುವುದರೊಂದಿಗೆ ಆಯ್ಕೆಮಾಡಿ ಸಂಘಟನೆಯ ಜವಾಬ್ದಾರಿ ನೀಡಿದರು.

ಈ ಸಂಧರ್ಭದಲ್ಲಿ ಮಳಲಿಯ 25ಕ್ಕೂ ಹೆಚ್ಚು ಮಂದಿ ಸಂಘಟನೆಗೆ ಸೇರ್ಪಡೆಯಾದರು

ಹಾಸನ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು,ತಾಲ್ಲೂಕು ಘಟಕದ ತೇಜೇಶ್,ರುತೇಶ್, ಭರತ್, ಚಂದ್ರಶೇಖರ್,ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ವಿನಯ್ ದೋಣಿಗಾಲ್ ,ಕೌಡಳ್ಳಿ ಘಟಕದ ಅಧ್ಯಕ್ಷರಾದ ಗಿರೀಶ್ ಹಾಗೂ ಕೌಡಳ್ಳಿ ಪದಾಧಿಕಾರಿಗಳು ಬಾಗೆ ಘಟಕದ ಅಧ್ಯಕ್ಷರಾದ ಶೇಖರ್ ರಾಜು, ಬಾಗೆ ಘಟಕದ ಪದಾಧಿಕಾರಿಗಳು ಹಾಗೂ ಮಳಲಿಯ ಗ್ರಾಮಸ್ಢರು ಈ ಸಂಧರ್ಭದಲ್ಲಿ ಹಾಜರಿದ್ದರು.

ನೂತನ ಘಟಕದ ಅಧ್ಯಕ್ಷರಿಗೆ ಹಾಗೂ ನಗರಾಧ್ಯಕ್ಷರಿಗೆ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆಯವರು ಅಭಿನಂದನೆ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *