ಬೇಲೂರು : ದಿನಾಂಕ 22-9-25 ರಂದು ಮಲೆನಾಡು ಮಲ್ಲಿಗೆ ಸಂಜೀವಿನಿ ಒಕ್ಕೂಟ ಅರೇಹಳ್ಳಿ ವತಿಯಿಂದ ಮಾಸಿಕ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಒಂದು ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಒಕ್ಕೂಟದ ಕಿರು ಉದ್ದಿಮದಾರರು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿದ್ದರು.

ಗ್ರಾಮ ಪಂಚಾಯತಿ ಅಧ್ಯಕ್ಷರು, ನಾರ್ವೆಪೇಟೆ ಪಂಚಾಯಿತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹಾಗೂ ಒಕ್ಕೂಟದ ಅಧ್ಯಕ್ಷರುಗಳು ದೀಪ ಬೆಳಗುವ ಮೂಲಕ ಮಾಸಿಕ ಸಂತೆ ಕಾರ್ಯಕ್ರಮವನ್ನು ಉದ್ಘಾಟನೆ ಗೊಳಿಸಿದರು

ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಮಾಸಿಕ ಸಂತೆ ಒಂದು ಉತ್ತಮವಾದ ವೇದಿಕೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ವ್ಯವಸ್ಥಾಪಕರು ಆದ ಧಾಕ್ಷಾಯಿನಿ ಎಂ, ಬಿ. ಬಿ ಆರ್ ಪಿ -ಇ ಪಿ, ಆದ ಪವಿತ್ರ.ಒಕ್ಕೂಟದ ಪದಾಧಿಕಾರಿಗಳು ಎಂಬಿಕೆ, ಎ ಲ್ ಸಿ ಆರ್ ಪಿ ಗಳು, ಒಕ್ಕೂಟದ ಸಿಬ್ಬಂದಿಗಳು ಭಾಗವಹಿಸಿದ್ದರು. ಸಹಾಯ ಸಂಘ ಸದಸ್ಯರುಗಳು ಮಾರಾಟದಲ್ಲಿ ತೊಡಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *