
ಸಕಲೇಶಪುರ: ಮನುಷ್ಯನಿಗೆ ಸಂಪತ್ತಿ ಗಿಂತ ಮುಖ್ಯವಾಗಿ ಆರೋಗ್ಯ ಬಹಳ ಮುಖ್ಯ, ಅದರಲ್ಲೂ ಈಗಿನ ಕಾಲದಲ್ಲಿ ವಿಶೇಷವಾಗಿ 40 ವರ್ಷ ದಾಟಿದ ನಂತರ ಮಂಡಿ ನೋವು ಎಲ್ಲರಿಗೂ ಕಾಡುತ್ತದೆ . ಇಂತಹ ಮಂಡಿ ನೋವಿನ ತಪಾಸಣೆಯನ್ನು ಉಚಿತವಾಗಿ ಸನಾತನ ಸೇವಾ ಟ್ರಸ್ಟ್ ಹಾಗೂ ಕಾವೇರಿ ಹಾಸ್ಪಿಟಲ್ ವೈದ್ಯರು ನಡೆಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದು ಮಾಜಿ ಸಚಿವರು , ಶಾಸಕರಾದ ಎಚ್ ಕೆ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ನುಡಿದರು.
ಸನಾತನ ಸೇವಾ ಟ್ರಸ್ಟ್ ನ ವಾರ್ಷಿಕ ಕಾರ್ಯಕ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಮೊಣಕಾಲು ನೋವು ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾಜಿ ಸಚಿವರಾದ ಎಚ್ ಕೆ ಕುಮಾರಸ್ವಾಮಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾಜಿ ಶಾಸಕರು ಎಚ್ಎಮ್ ವಿಶ್ವನಾಥ್ ಮಾತನಾಡಿ ಸಕಲೇಶಪುರದಲ್ಲಿ ಸನಾತನ ಸೇವ ಟ್ರಸ್ಟ್ ಒಂದು ವರ್ಷದಿಂದ ಬಲಿಷ್ಠವಾದ ತಂಡವನ್ನು ಕಟ್ಟಿಕೊಂಡು ಉತ್ತಮವಾದ ಸಮಾಜ ಸೇವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಸಂಘಟನೆಗೆ ಶಕ್ತಿ ನೀಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಹಾಗೂ ಇಂದಿನ ಉಚಿತ ಮೊಣಕಾಲು ಹಾಗೂ ಆರೋಗ್ಯ ತಪಾಸಣಾ ಶಿಬಿರವು ಸಕಲೇಶಪುರದ ಇತಿಹಾಸದಲ್ಲಿ ಮೊದಲನೇ ಬಾರಿಗೆ ನಡೆಸುತ್ತಿದ್ದಾರೆ. ಈಗಾಗಲೇ ಸುಮಾರು 150 ಜನ ಚಿಕಿತ್ಸೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ ..ಒಂದು ದಿನದಲ್ಲಿ ಈ ಕಾರ್ಯಕ್ರಮವನ್ನು ಮಾಡಲು ಸಾಧ್ಯವಿಲ್ಲ ಮುಂದಿನ ದಿನದಲ್ಲಿ ಮತ್ತೊಮ್ಮೆ ಕಾವೇರಿ ಹಾಸ್ಪಿಟಲ್ ನ ವೈದ್ಯರನ್ನು ಕರೆಸಿ ಹೆಚ್ಚಿನ ಜನರಿಗೆ ಅನುಕೂಲವಾಗುವಂತೆ ಚಿಕಿತ್ಸೆಯನ್ನು ಪಡೆಯಲು ಅನುಕೂಲ ಮಾಡಿಕೊಡಲಾಗುವುದು ಎಂದರು.
ಕಾವೇರಿ ಹಾಸ್ಪಿಟಲ್ ಹಾಗೂ ಜೋಶ್ ಸೆಂಟರ್ ನಾ ವೈದ್ಯರಾದ ಜಗದೀಶ್ ಮಾತನಾಡಿ ಮಂಡಿ ನೋವೆಂಬುದು ಈಗಿನ ಯುವ ಪೀಳಿಗೆ ಮತ್ತು ವಯಸ್ಸಾದಂತೆ ಎಲ್ಲರಿಗೂ ಸಾಮಾನ್ಯವಾಗಿ ಕಾಡುವ ಕಾಯಿಲೆಯಾಗಿದ್ದು , ಇದಕ್ಕೆ ಮೂಲ ಕಾರಣ ನಮ್ಮ ಜೀವನಶೈಲಿ, ಈಗಿನ ಜನತೆ ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲನ್ನು ಬದಲಾಯಿಸಿಕೊಂಡರೆ ಇಂಥ ಖಾಯಿಲೆಗಳಿಂದ ದೂರವಿರಬಹುದು ಹಾಗೂ ನಮ್ಮ ಹಾಸ್ಪಿಟಲ್ ರೋಬೋಟಿಕ್ಯ ಶಸ್ತ್ರಚಿಕಿತ್ಸೆ ಮುಖಾಂತರ ರೋಗಿಗಳಿಗೆ ನೂರರಷ್ಟು ಫಲಿತಾಂಶ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಮಂಜುನಾಥ್ ಸಂಗೀ, ಪುರಸಭಾ ಅಧ್ಯಕ್ಷರಾದ ಜ್ಯೋತಿ ರಾಜಕುಮಾರ್, ಕಾರ್ಯದರ್ಶಿ ಲೋಕೇಶ್ , ರುದ್ರೇಶ್, ಮಹೇಶ್, ನಿಯೋಜಿತ ಟ್ರಸ್ಟ್ ನ ಅಧ್ಯಕ್ಷರಾದ ಬಾಲರಾಜ್, ಜಂಬಾಡಿ ಲೋಹಿತ್ ರಘುಗೌಡ, ಸಂದೇಶ್, ಜಯರಾಜ್ ಸೇರಿದಂತೆ ಟ್ರಸ್ಟ್ ನ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
