
ಹಾಸನ : ಕರ್ನಾಟಕ ಸರ್ಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಸನ, ಜಿಲ್ಲಾಡಳಿತ ಹಾಸನ, ಜಿಲ್ಲಾ ಪಂಚಾಯತ್ ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ, ರೆಡ್ ಕ್ರಾಸ್ ಹಾಸನ, ಎಲ್ಲಾ ರೋಟರಿ ಕ್ಲಬ್ ಗಳು, ಎಲ್ಲಾ ಲಯನ್ಸ್ ಕ್ಲಬ್ ಗಳು ಹಾಗೂ ಇನ್ನಿತರ ಜಿಲ್ಲಾ ಮಟ್ಟದ ಎಲ್ಲಾ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಯುವಜನೋತ್ಸವ-2025 ರ ಅಂಗವಾಗಿ ಜಿಲ್ಲಾ ಮಟ್ಟದ “ಮ್ಯಾರಥಾನ್ ಸ್ಪರ್ಧೆ 2025” ಮತ್ತು “ಬೈಕ್ ರಾಲಿ-2025” (ಎಚ್.ಐ.ವಿ/ಏಡ್ಸ್ ಜಾಗೃತಿಗಾಗಿ) ಅನ್ನು ಹಮ್ಮಿ ಕೊಂಡಿದ್ದು, ಸುಮಾರು 100 ಜನಕ್ಕು ಅಧಿಕ ಜನ ಸ್ಪರ್ಧಿಗಳು ಭಾಗವಹಿಸಿದ್ದರು.
ನಂತರ ಬೈಕ್ ರಾಲಿ ನಡೆದು ಸುಮಾರು 50ಕ್ಕೂ ಹೆಚ್ಚು ಬೈಕ್ ಸವಾರರು ರಾಲಿಯಲ್ಲಿ ಭಾಗವಹಿಸುವುದರ ಮೂಲಕ ಜಾಗೃತಿಯನ್ನು ಮೂಡಿಸಿದರು.
ನಂತರ ಸಭಾ ಕಾರ್ಯಕ್ರಮ ನಡೆದು ಎಚ್.ಐ.ವಿ ಏಡ್ಸ್ ಜಾಗೃತಿಯ ಬಗ್ಗೆ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.
ಮ್ಯಾರಥಾನ್ ನಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದ್ರಾಕ್ಷಾಯಿಣಿ ಜಿ ಕೆ ರವರು, ಡಿ.ಎಚ್. ಓ ಡಾ!!ಅನಿಲ್ ಎಚ್ ರವರು, ಟಿ.ಹೆಚ್.ಓ ಡಾ!!ವಿಜಯ್ ಗೊರೂರು ರವರು, ನಮ್ಮ ಅಸಿಸ್ಟೆಂಟ್ ಗವರ್ನರ್ ಜೆ.ಎನ್ ಮಂಜುನಾಥ್ ರವರು, ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ರೋ ಸಿದ್ದೇಶ್ ರವರು, ಐ.ಎಫ್.ಎಂ.ಆರ್ ನ ಅಧ್ಯಕ್ಷರಾದ ಪ್ರಸನ್ನ ಕುಮಾರ್ ರವರು, ರೋಟರಿ ಸನ್ ರೈಸ್ ಕಾರ್ಯದರ್ಶಿಯಾದ ಕೆ.ಎಸ್.ಯೋಗೇಶ್ ರವರು ರೋ !! ರಾಜೇಶ್ ರವರು ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.
ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಇಂತಿ,”ಟೀಮ್ ಸನ್ ರೈಸ್ “





