
ಸಕಲೇಶಪುರದ ಎಚ್ ಡಿ ಪಿ ಎಂ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಂತಾರಾಷ್ಟ್ರೀಯ ಕಾಫಿ ಸಂಘಟನೆಯು ಅಕ್ಟೋಬರ್ 1 ನ್ನು ಅಂತಾರಾಷ್ಟ್ರೀಯ ಕಾಫಿ ದಿನವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಬಾರಿ 11ನೇ ವರ್ಷಾಚರಣೆಯ ಸಂಭ್ರಮವನ್ನು ಸಕಲೇಶಪುರದಲ್ಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಮಾತನಾಡಿದ ಕೆ ಜಿ ಎಪ್ ಕಾರ್ಯದರ್ಶಿ ಟಿ ಪಿ ಸುರೇಂದ್ರ ರವರು 01-10-2025 ಬುಧವಾರಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ಬಸವೇಶ್ವರ ಪುತ್ಥಳಿವರೆಗೆ ಕಾಲ್ನಡಿಗೆ ಜಾಥಾ ನಂತರ ಆನೆಮಹಲ್ ಹತ್ತಿರ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಸನ ಜಿಲ್ಲೆಯ ಸಂಸದರಾದ ಶ್ರೇಯಸ್ ಪಾಟೀಲ್, ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜುನಾಥ್, ಕಾಫಿ ಮಂಡಳಿಯ ಅಧ್ಯಕ್ಷರು ಮತ್ತು CEOಕನ್ನಡ ಚಲನಚಿತ್ರ ಹಿರಿಯ ನಟ ದೊಡ್ಡಣ್ಣ ಮಿಸ್ ಯೂನಿವರ್ಸ್ ಆಫ್ ಕರ್ನಾಟಕ ಡಾ.ವಂಶಿಉದಯ್ ಖ ಳನಟ ವಿಶ್ವರಾಜ್ , ನಮ್ಮ ಜಿಲ್ಲೆಯ ಬೇಲೂರು ಶಾಸಕರಾದ ಎಚ್ ಕೆ ಸುರೇಶ್ ಅರಕಲಗೂಡು ಶಾಸಕರಾದ ಎ ಮಂಜು, ಯಡಕೇರಿ ಡಾಕ್ಟರ್ ಸುಪುತ್ರ ಗೌಡ, ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರವಾಸಿಗರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಪರಿಶುದ್ಧ ಕಾಫಿ ವಿತರಿಸಲಾಗುವುದು. ಜೊತೆಗೆ, ಕಾಫಿ ನಡೆದು ಬಂದ ದಾರಿ, ಅದರ ಆರೋಗ್ಯಕರ ಅಂಶಗಳು, ಪರಿಸರಕ್ಕೆ ನೀಡಿರುವ ಕೊಡುಗೆಗಳು ಹಾಗೂ ಕಾಫಿ ಉದ್ಯಮದಲ್ಲಿನ ಸವಾಲುಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಇದೆ ಸಂದರ್ಭದಲ್ಲಿ ಕಾಪಿ ಕುರಿತಾದ ಸ್ಥಬ್ದ ಚಿತ್ರವನ್ನು ಮೆರವಣಿಗೆಯಲ್ಲಿ ನಡೆಸಲಾಗುವುದು ಎಂದರು.
ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾದ ಮಂಜುನಾಥ್ ಶೆಟ್ಟಿ, ಕೆ ಜಿ ಎಪ್ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್, ಎಚ್ ಡಿ ಪಿ ಎ ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ಎಂ ಜೆ ಸಚಿನ್ ಉಪಸ್ಥಿತರಿದ್ದರು.
