ಸಕಲೇಶಪುರ : ಪಟ್ಟಣದ ಕ್ರಾಫರ್ಡ ಸರ್ಕಾರಿ ಆಸ್ಪತ್ರೆಯ ಹಿಂದಿ ಮಾತನಾಡುವ ರೋಗಿ ಒಬ್ಬ ನೆನ್ನೆ ತಡ ರಾತ್ರಿ 1:30 ರ ಸಮಯದಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿ ತುರ್ತು ಚಿಕಿತ್ಸೆ ಅಪಘಾತ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಿರುಚಾಡಿ, ವಿಚಿತ್ರ ವರ್ತನೆ ಮಾಡಿ ರಾತ್ರಿ ಇಡಿ ವಾರ್ಡಿನಲ್ಲಿದ್ದ ರೋಗಿಗಳಿಗೆ ನಿದ್ರಿಸಲು ಬಿಡದೆ ಬೆಳಗಿನ ಜಾವ 5:30 ರ ಸಮಯದಲ್ಲಿ ವಾರ್ಡ್ ನಿಂದ ಹೊರಗೆ ಬಂದು ಆಸ್ಪತ್ರೆಯ ಒಳಬದಿ ಇರುವ ಎಕ್ಸ್ ರೇ ಕೊಠಡಿ ಪಕ್ಕದಲ್ಲಿ ಗೋಡೆಯಂತೆ ನಿರ್ಮಾಣಗೊಂಡ ಜಾಲರಿಯನ್ನು ಒಡೆದು ಕಿಂಡಿಗೊಳಿಸಿ ಹೊರಗಡೆ ಪರಾರಿ ಯಾಗಿದ್ದಾನೆ.

ರೋಗಿಯನ್ನು ತಡೆಯಲು, ಇವನನ್ನು ಹಿಡಿದು ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿಯವರು ಯಾರು ಮುಂದೆ ಬಂದಿಲ್ಲ ಎಂದು ಆಸ್ಪತ್ರೆಯ ರೋಗಿಗಳು ಹಾಗೂ ಪಾಲಕರು ದೂರಿರುತ್ತಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿ ದಾಖಲಾಗಿದ್ದ ಇತರೆ ರೋಗಿಗಳಿಗೆ ಹಾಗೂ ರೋಗಿಗಳ ಪಾಲಕರು, ಮಹಿಳೆಯರು, ಭಯ ಬಿತರಾಗಿ ರಾತ್ರಿ ಇಡಿ ಕಾಲ ಕಳೆಯುವಂತಹ ಪ್ರಸಂಗ ಎದುರಾಗಿದೆ,

ಆಸ್ಪತ್ರೆ ಯಲ್ಲಿ ರಾತ್ರಿ ಸಮಯದ ಡ್ಯೂಟಿಗಾಗಿ ಪೊಲೀಸರು ಇಲ್ಲದಿರುವುದು ಹಾಗೂ ರಾತ್ರಿ ಪಾಳಿಯ ಆಸ್ಪತ್ರೆ ಸಿಬ್ಬಂದಿ ವರ್ಗದವರು ನಿರ್ಲಕ್ಷ್ಯ ತೋರಿರುವುದರಿಂದ ಈ ಒಂದು ದುರಂತಕ್ಕೆ ಕಾರಣವಾಗಿದೆ.

ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ರಾತ್ರಿ ಸಮಯದಲ್ಲಿ ಸರಿಯಾದ ಭದ್ರತೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ರೋಗಿಗಳು ದೂರಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *