
ಆಲೂರು: ಕೆಂಚಮ್ಮನ ಹೊಸಕೋಟೆ ಲಯನ್ಸ್ ಕ್ಲಬ್ ವತಿಯಿಂದ ಫುಡ್ ಕಿಟ್ ವಿತರಣೆ:ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಲಯನ್ಸ್ ಕ್ಲಬ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಅಂಗವಿಕಲರು ಮತ್ತು ಬಡವರಿಗೆ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಕೆಂಚಮ್ಮ ಹೊಸಕೋಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ ಮಾತನಾಡಿ ಲಯನ್ಸ್ ಸೇವಾ ಸಂಸ್ಥೆ ಪ್ರತಿ ವರ್ಷವೂ ಅನೇಕ ಸೇವ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈ ವರ್ಷವೂ ಸಹ ಸ್ವಚ್ಛತಾ ಕಾರ್ಯಕ್ರಮ,ಅಂಗನವಾಡಿ ಮಕ್ಕಳಿಗೆ ಸ್ಮಾರ್ಟ್ ಬೋರ್ಡ್ ರೈಟಿಂಗ್ ಪ್ಯಾಡ್ ವಿತರಣೆ, ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಸರ್ಕಾರಿ ಶಾಲೆಗಳಿಗೆ ಗೇಟ್ ವ್ಯವಸ್ಥೆ, ಇಂತಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಇಂಥ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನಡೆಯುತ್ತಿರುವ ಎಲ್ಲಾ ಸದಸ್ಯರುಗಳಿಗೂ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ, ಖಜಾಂಚಿ ರಮೇಶ್ ಕುರೇಗಲ್, ಕಾರ್ಯದರ್ಶಿ ಕುಮಾರ್ ಬೆಂಬಳೂರು, ಮಾಜಿ ಅಧ್ಯಕ್ಷ ಕುಮಾರ್ ಕೆ ಎನ್, ದಿನೇಶ್, ಕೆ ಬಿ ಕುಮಾರ್, ದುಶಾಂತ್, ಮೋಹನ್ ಕಾಡ್ಲೂರು, ಪ್ರದೀಪ್, ದೇವರಾಜ್, ರಾಜು, ಸಂಸ್ಥೆಯ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.



