ಸಕಲೇಶಪುರ : ತಾಲೂಕು ಘಟಕದ ಅಧ್ಯಕ್ಷರಾದ ಗಗನ್ ಗೌಡ ಅವರ ನೇತೃತ್ವದಲ್ಲಿ ವೇದಿಕೆಯ ಸದಸ್ಯರು ಸ್ಥಳಕ್ಕೆ ತೆರಳಿ, ಸಂಸ್ಥೆಯ ನಿರ್ವಾಹಕರಿಗೆ ನಾಮಫಲಕ, ಬೋರ್ಡ್ ಹಾಗೂ ಜಾಹೀರಾತು ಫಲಕಗಳಲ್ಲಿ ಕನಿಷ್ಠ 60% ಕನ್ನಡ ಬಳಕೆಯು ಕಡ್ಡಾಯ ಎಂಬ ನಿಯಮವನ್ನು ಪಾಲಿಸಲು ಸೂಚನೆ ನೀಡಿದ್ದಾರೆ.

ಇದು ಕೇವಲ ಒಂದು ಭಾಷೆಯ ವಿಷಯವಲ್ಲ — ಇದು ನಮ್ಮ ಅಸ್ತಿತ್ವದ, ಗೌರವದ, ಮತ್ತು ಸಂವಿಧಾನಿಕ ಹಕ್ಕಿನ ಹೋರಾಟ.ಕನ್ನಡವನ್ನು ಕಡೆಗಣಿಸುವ ಯಾವುದೇ ಕಂಪನಿ, ಎಷ್ಟು ದೊಡ್ಡದಾದರೂ ಕೂಡ, ಕರ್ನಾಟಕದ ಮಣ್ಣಿನಲ್ಲಿ ಕನ್ನಡವಿಲ್ಲದೆ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಗಗನ್ ಗೌಡ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಅಧ್ಯಕ್ಷ ವಸಂತ ಬೊಮ್ಮನಕೆರೆ.ನಗರ ಘಟಕ ಅಧ್ಯಕ್ಷ ಪ್ರಜ್ವಲ್ ಮತ್ತು ಕರವೇ ಕುಟುಂಬದ ಸದಸ್ಯರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *