
ಆಲೂರು : ವರ್ಷಕ್ಕೊಮ್ಮೆ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬ ದೇವಿಯ ಬಾಗಿಲು ಮುಚ್ಚಿದ 2 ದಿನಗಳ ನಂತರ ಆಕೆಯ ಹಿರಿಯ ಸಹೋದರಿ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಶ್ರೀ ಕೆಂಚಾಂಬ ದೇವಿಯ ಚಿಕ್ಕ ಜಾತ್ರಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು..
ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿಯೇ ದೇವಾಲಯದ ಶುದ್ಧೀಕರಣ ದಿಂದ ಹಿಡಿದು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಯಥಾವತ್ತಾಗಿ ಆರಂಭಗೊಂಡವು ಬೆಳಿಗ್ಗೆ 8 ಗಂಟೆಗೆ ಮಂಗಳ ವಾದ್ಯಗಳ ಸಮೇತ ದೇವಿಯ ಉತ್ಸವ ಮೂರ್ತಿಯು ಹರಿಹಳ್ಳಿ ಗ್ರಾಮದ ಮೂಲ ದೇವಸ್ಥಾನದಿಂದ ಹೊರಟು ಸುಮಾರು 2 ಕಿಲೋಮೀಟರ್ ಭವ್ಯ ಮೆರವಣಿಗೆಯಲ್ಲಿ ಸಾಗಿ 10 ಗಂಟೆಗೆ ಜಾತ್ರಾ ಮೈದಾನಕ್ಕೆ ಬಂದು ತಲುಪಿತು ನಂತರ ದೇವಸ್ಥಾನದಲ್ಲಿ ಕೆಂಚಮ್ಮ ದೇವಿಗೆ ವಿಶೇಷ ಅಲಂಕಾರ,ಅಭಿಷೇಕ, ನೈವೇದ್ಯಗಳನ್ನು ನೆರವೇರಿಸಲಾಯಿತು.
ಮಧ್ಯಾಹ್ನ 1 ಗಂಟೆಗೆ ಅನ್ನಬಲಿ ಪ್ರಧಾನ ವಿಧಾನ ನಡೆದು 1:30 ಕ್ಕೆ ಮಹಾ ಮಂಗಳಾರತಿ ನಡೆಯಿತುಮಹಾ ಮಂಗಳಾರತಿಯಲ್ಲಿ ತಾಲ್ಲೂಕು ತಹಸೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಗಣ್ಯರು ಪಾಲ್ಗೊಂಡು ದರ್ಶನ ಪಡೆದರು..
ನಂತರ ನೆನ್ನೆ ರಾತ್ರಿ ಹರಿಹಳ್ಳಿಯ ಮೂಲ ದೇವಸ್ಥಾನದ ಆವರಣದಲ್ಲಿ ದೇವಿಯ 7 ಮುಖಗಳಿಗೆ ಸಿಂಗಾರ ಮಾಡಿ ಸಪ್ತ ಮಾತೃಕೆಯರ ಅಲಂಕಾರವನ್ನು ಮಾಡಲಾಗಿತ್ತು ತದನಂತರ ಬನ್ನಿಮಂಟಪದಲ್ಲಿ ವೀರಭದ್ರನ ಸಮಾಗಮವಾದ ನಂತರ ಮಧ್ಯಾಹ್ನ 3 ಗಂಟೆಗೆ ಕೆಂಡೋತ್ಸವ ನಡೆದು ನಂತರ ನೆರೆದಿದ್ದ ಭಕ್ತರಿಗೆ ಅನ್ನ ಪ್ರಸಾದ ವಿನಿಯೋಗವನ್ನು ಮಾಡಲಾಯಿತು ಹಾಗೂ ಬಂದಂತ ಭಕ್ತರಿಗೆ ದೇವಿಯ ಪಾದ ಮುಟ್ಟಿ ನಮಸ್ಕರಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು.




