ಸಕಲೇಶಪುರ : ಧರ್ಮಸ್ಥಳದ ಸೌತಡ್ಕ ಗ್ರಾಮದಲ್ಲಿ ಕಲ್ಲಡ್ಕ ಮಾದರಿ ಆಂಗ್ಲ ಮಾಧ್ಯಮ “ಮಹಾಗಣಪತಿ” ಶಾಲೆಗೆ ಶಂಕುಸ್ಥಾಪನೆ ಮಾಡಿ ಪ್ರಚಾರಕ್ಕಾಗಿ ಸಕಲೇಶಪುರದ ಮಾನ್ಯ ಶಾಸಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಚಿತ್ತಾಪುರದಲ್ಲಿ ಕಾನೂನು ಪ್ರಕಾರ ಪಥ ಸಂಚಲನ ಮಾಡೇ ಮಾಡುತ್ತೇವೆ ಎಂದು ಗಂಟಾಘೋಷವಾಗಿ ಹೇಳಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸುವು ತಂದಿದೆ.

ಹಿಂದೂ ಸಮಾಜವನ್ನ ಜಾಗೃತಿ ಮಾಡಲು ಪ್ರಚೋದನೆ ಅವಶ್ಯವಿದ್ದು ಹಿಂದೂ ಮಲಗಿದ್ದು ಅವನನ್ನ ಏಳಿಸುವುದು ನಮ್ಮ ಕರ್ತವ್ಯ ಎಂಬುದರ ಜೊತೆಗೆ ನಾವು ಆಯ್ದು ಕೊಂಡಿರುವ ಮಾರ್ಗವೇ ಕಷ್ಟದ ಮಾರ್ಗ ಹಿಂದೂ ಸಮಾಜವನ್ನ ಜಾಗೃತಿ ಮಾಡುವುದು ಹಾಗಾಗಿ ಈ ಮಾರ್ಗದಲ್ಲಿ ಕಲ್ಲು ಮುಳ್ಳು ಇದೆ ಅದನ್ನ ಎದುರಿಸಿ ಹಿಂದೂ ಸಂಘಟನೆ ಮಾಡುವುದು ನಮ್ಮ ಧ್ಯೇಯ ಎಂಬುದನ್ನ ಡಾಕ್ಟರ್ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು.

ದ್ವೇಷದ ರಾಜಕೀಯ ಬೇಡ ಪ್ರೀತಿ ಮತ್ತು ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಡಾಕ್ಟರ್ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಸಿಮೆಂಟ್ ಮಂಜು, ಹಿಂದೂ ಮುಖಂಡ ರಘು ಸಕಲೇಶಪುರ, ಕೌಶಿಕ್ ಹೆನ್ನಲಿ, ಬಿಜೆಪಿ ಮುಖಂಡರಾದ ರಾಮಚಂದ್ರೇಗೌಡರು, ಜಯಪ್ರಕಾಶ್ , ಅಗ್ನಿ ಸೋಮಶೇಖರ್, ಮಧು ಬೊಮ್ಮನಕೆರೆ, ಸತ್ಯನಾರಾಯಣ ಗುಪ್ತಾ, ನೇತ್ರ ಮಂಜುನಾಥ್, ನರೇಶ್ ಕನ್ನೆಮನೆ, ಕುಮಾರಸ್ವಾಮಿ ಅರೆಕೆರೆ, ವಿನಯ್, ಪ್ರವೀಣ್ ಜೈನ ಉಪಸ್ಥಿತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *