
ಸಕಲೇಶಪುರ : ಮದ್ದೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟ ಮಾಡಿದನ್ನ ಖಂಡಿಸಿ ಶಾಂತಿಯುತ ಪ್ರತಿಭಟನೆ ಮಾಡುತಿದ್ದ ಮದ್ದೂರು ಹಿಂದೂಗಳ ಮೇಲೆ ಲಾಠಿಪ್ರಹಾರ ಮಾಡಿರೊದು ವ್ಯವಸ್ಥಿತ ಸಂಚು ಆಗಿದ್ದು, ಪೊಲೀಸ್ ಮಹಾನಿರ್ದೇಶೇಕರು ಯಾವ ಕಾರಣಕ್ಕೆ ಲಾಠಿಚಾರ್ಜ್ ಮಾಡಲು ಆದೇಶಿಸಿದ್ದಾರೆ ಎಂಬುದು ತನಿಖೆ ಆಗಬೇಕು. ಮದ್ದೂರಿನಲ್ಲಿ ಮಹಿಳಾ ಪ್ರತಿಭಟನಾಕಾರರ ಮೇಲೆ ಏಕ-ಏಕಿ ಲಾಠಿಪ್ರಹಾರ ಮಾಡಿರೋದರ ಹಿಂದೆ ದುರುದ್ದೇಶ ಇದ್ದು ಇದರ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಬೇಕು ಎಂದು ಪ್ರತಿಭಟನೆ ಮೂಲಕ ಆಗ್ರಹಿಸುತ್ತೇವೆ.
ಭಾರತ ದೇಶದ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಾರ್ವಜನಿಕ ಗಣೇಶ ಉತ್ಸವ ಮಾಡಿ ಕ್ರಾಂತಿಕಾರಿಗಳಿಗೆ ಸ್ವಾತಂತ್ರಹೋರಾಟಗಾರರಿಗೆ ಸ್ಫೂರ್ತಿ ಆಗಿದ್ದ ಗಣೇಶ ಉತ್ಸವ ನಿರಂತರವಾಗಿ ನಡೆದುಕೊಂಡು ಬರುತ್ತಿರುವಾಗ ಮುಸ್ಲಿಂ ಸಮುದಾಯ ಮಸೀದಿ ಬಳಿ ಬಂದಾಗ ಕಲ್ಲು ತೂರಾಟ. ಚಪ್ಪಲಿ ಎಸಿಯೋದು, ಮುಸ್ಲಿಂ ಮಕ್ಕಳಿಂದ ಗಣಪತಿ ಮೂರ್ತಿಗೆ ಉಗೋಳೋದು ಮಾಡಿ ಸಾಮರಸ್ಯ ಹದೆಗೆಡುಸುತ್ತಿರುವ ವಿಷಯ ಜಗದ್ ಜಾಹೀರಾಗಿದೆ.
ಇದೆ ವಿಷಯದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ಗಣಪತಿ ವಿಸರ್ಜನಾ ಮೆರವಣಿಗೆ ರಾಮ್ ರಹೀಮ್ ರಸ್ತೆಗೆ ಬಂದಾಗ ಮುಸ್ಲಿಂ ಕಿಡಿಗೇಡಿಗಳು ಏಕ ಏಕಿ ಕಲ್ಲು ತೂರಾಟ ಮಾಡಿ ವಿದ್ಯುತ್ ನಿಗಮದ ನಿಯಮ ಮೀರಿ ಕಲ್ಲು ತೂರಾಟ ಮಾಡಿದ್ದೂ ಹಾಗು ಯಾವ ಕಡೆಯಿಂದ ಕಲ್ಲು ಬರುತ್ತಿದೆ ಎಂದು ಗೊತ್ತಾಗಬಾರದು ಎಂದು ಬೀದಿ ದೀಪ ತೆಗೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಇರ್ಫಾನ್ ಮತ್ತು ಜಾಫರ್ ಗುಂಪಿನ ಎಲ್ಲ 30 ಜನರ ಮೇಲೆ UAPA ಕಾಯ್ದೆ ಅಡಿ ಕೇಸ್ ದಾಖಲಿಸಬೇಕು ಮತ್ತು ಕೋಮುಗಲಭೆ ಸೃಷ್ಠಿಸಲು ವ್ಯವಸ್ಥಿತ ಸಂಚು ರೂಪಿಸಿದ ಎಲ್ಲ ಗಲಭೆಕೋರರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಶಿಕ್ಷೆ ಆಗುವ ಹಾಗೆ ಕಾನೂನು ಪ್ರಕ್ರಿಯೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಬೇಕು ಎಂದು ಹಿಂದೂ ಹಿತರಕ್ಷಣಾ ಸಮಿತಿವತಿಯಿಂದ ಮನವಿ ಸಲ್ಲಿಸಿದರು.
