ಸಕಲೇಶಪುರ : ಕ.ವಿ.ಪ್ರ.ನಿ.ನೌಕರರ ಸಂಘ ಸಕಲೇಶಪುರ ವಿಭಾಗದ ಅಧ್ಯಕ್ಷರಾದ ಚನ್ನಬಸಪ್ಪ.ರಾಮಣ್ಣನವರ್ ಮಾತನಾಡಿ ಬ್ರಿಟೀಷರು ನಮ್ಮ ದೇಶವನ್ನು ಆಳ್ವಿಕೆ ಮಾಡುತ್ತಿದ್ದಾಗ, ಕೇಂದ್ರೀಯ ಮತ್ತು ಪ್ರಾಂತೀಯ ಸರ್ಕಾರಗಳ ಜೊತೆಗೆ 543 ಸಂಸ್ಥಾನಗಳು ಕೂಡ ಆಡಳಿತ ನಡೆಸುತ್ತಿತ್ತು. ಕರ್ನಾಟಕದಲ್ಲಿ ಐದು ಪ್ರಾಂತ್ಯಗಳಾಗಿ ಹಂಚಲಾಗಿತ್ತು. ಅದರಲ್ಲಿ ಮೈಸೂರು ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಮತ್ತು ಕೊಡಗು ಪ್ರದೇಶ.

ಈ ಐದು ಪ್ರಾಂತ್ಯಗಳು ಸ್ವತಂತ್ರ ಅಸ್ತಿತ್ವ ಉಳಿಸಿಕೊಂಡು ತಮ್ಮದೇ ಆಡಳಿತವನ್ನು ನಡೆಸುತ್ತಿತ್ತು. ಇಂತಹ ಸಂದರ್ಭದಲ್ಲಿ 1947 ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು.

ಸ್ವಾತಂತ್ರ್ಯವನ್ನು ಪಡೆದುಕೊಂಡ ಮೇಲೆ. ಸ್ವತಂತ್ರ ಭಾರತದೊಳಗೆ 543 ಸಂಸ್ಥಾನಗಳು ಸ್ವತಂತ್ರ ಅಸ್ತಿತ್ವನ್ನು ಇಟ್ಟುಕೊಂಡರೆ, ಭಾರತದ ಐಕ್ಯತೆ ಸಾಧ್ಯವಾಗುತ್ತಿರಲಿಲ್ಲ ಎಂದು ಯೋಚಿಸಿದ ಅಂದಿನ ಸರ್ಕಾರ, ಈ 543 ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಳಗಡೆ ಸೇರಿಸುವ ಕೆಲಸವನ್ನು ಮಾಡಿತು ಆಗ 543 ಸಂಸ್ಥಾನಗಳು ನಮ್ಮ ದೇಶದೊಳಗಡೆ ವಿವಿಧ ರಾಜ್ಯಗಳಲ್ಲಿ ಸೇರಿಕೊಂಡವು. 543 ಸಂಸ್ಥಾನಗಳನ್ನು ಸೇರಿಸುವಾಗ ಇಡೀ ದೇಶ ಒಂದು ನಿರ್ಣಯ ಕೈಗೊಂಡಿತು. ಅದರ ಪ್ರಕಾರ, ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆ ಮಾಡುತ್ತಾರೆ ಹಾಗಾಗಿ ಕನ್ನಡ ನಾಡು ನುಡಿ ನೆಲ ಜಲವನ್ನು ಉಳಿಸಿಕೊಳ್ಳುವ ಜವಬ್ದಾರಿ ನಮ್ಮ ನಿಮ್ಮಲ್ಲರ ಮೇಲೆ ಇದೆ ಎಂದರು.

ಹಾನುಬಾಳು ಶಾಖೆಯ ಶಾಖಾಧಿಕಾರಿ ಕೆ.ನಾಗರಾಜ ರವರು ಪ್ರಾಸ್ಥಾವಿಕವಾಗಿ ಮಾತಾನಾಡಿದರು.ಈ ಶುಭ ಸಂಧರ್ಬದಲ್ಲಿ ಸಂದರ್ಭದಲ್ಲಿ ಸಕಲೇಶಪುರ ಟೌನ್ ಶಾಖೆಯ ಸಹಾಯಕ ಇಂಜನಿಯರ್ ಆದ ಕೆ.ಆರ್.ನಿರಂಜನ್ ರವರು ಕ.ವಿ.ಪ್ರ.ನಿ.ನೌಕರರ ಸಂಘ ಸಕಲೇಶಪುರ ವಿಭಾಗದ ಮಾಜಿ ಅಧ್ಯಕ್ಷರುಗಳಾದ ಸುರೇಶ ಮತ್ತು ರಂಗನಾಥ ರವರು ಮತ್ತು ಖಜಾಂಚಿಗಳಾದ ಮಧುಸೂದನ್ ರವರು ಮತ್ತು ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಯುವರಾಜ ರವರು ಮುಖ್ಯ ಅಥಿತಿಗಳಾಗಿ ಭಾವಹಿಸಿದ್ದರು.

ಸಕಲೇಶಪುರ ವಿಭಾಗದ ಕಲ್ಯಾಣ ಸಂಸ್ಥೆ(466) ಸಹ ಕಾರ್ಯದರ್ಶಿ ರಾಠೋಡ್ ರವರು ವಂದಿಸಿದರು ಹಾಗೂ ಗೌರಾವಾನ್ವಿತ ಅಧಿಕಾರಿಗಳು/ನೌಕರರು ಭಾಗವಹಿಸಿದ್ದರು

ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು 💐🤝🙏

ಮಧುಸೂದನ್.ಜಿ.ಆರ್, ಖಜಾಂಚಿ : ಕ.ವಿ.ಪ್ರ.ನಿ.ನೌಕರರು ಸಂಘ (659) ಸಕಲೇಶಪುರ ವಿಭಾಗ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *