
ಆಲೂರು : ತಾಲೂಕು ಹರಿಹಳ್ಳಿ ಮೂಲ ಗ್ರಾಮದಲ್ಲಿ ನೆಲೆಸಿದ ಕೆಂಚಮ್ಮನ ಹೊಸಕೋಟೆಯ ಶ್ರೀ ಕೆಂಚಾಂಬಿಕೆಯ ದೇಗುಲದ ಬಾಗಿಲು ತೆರೆಯಲಾಯಿತು
ಕಳೆದ ವಾರ ಜಾತ್ರೆ ಮುಗಿಸಿ ಮುಚ್ಚಲಾಗಿದ್ದ ಶ್ರೀ ಕೆಂಚಾಂಬಿಕೆಯ ದೇವಸ್ಥಾನದಲ್ಲಿ ಇಂದು ಮಧ್ಯಾಹ್ನ 12ಕ್ಕೆ ಪುಣ್ಯಾಹ, ಸ್ವಸ್ತಿವಾಚನ, ಸಂಪ್ರೋಕ್ಷಣೆ ನೆರವೇರಿಸಿ ನಂತರ ಗರ್ಭಗುಡಿಯ ಬಾಗಿಲು ತೆರೆಯಲಾಯಿತು.
ನಂತರ ಸೇವಾಕರ್ತರ ಸೇವಾರ್ಥದ ಭಾಗವಾಗಿ ಬೆಳ್ಳಿ ಕವಚ, ಕಮಲಹಸ್ತ, ಅಭಯಹಸ್ತ ಧರಿಸಿದ ದೇವೆಯು ದಂಡಧಾರಿಯಾಗಿರುವಂತೆ ಅಲಂಕರಿಸಿ, ಎಂದಿನ ಪ್ರಕಾರ ಏಳು ಸೀರೆ, ಮಂದಹಾಸದಿಂದ ಹೊಳೆಯುವ ಮುಖ ಧರಿಸಿ ಪೂಜೆ ನೆರವೇರಿಸಲಾಯಿತು.
ಅಲಂಕಾರ, ಅಭಿಷೇಕದ ನಂತರ ಬಲಿಪ್ರದಾನವಾದ ಮೇಲೆ ಪ್ರದಾನ ಅರ್ಚಕ ಶ್ರೀ ರಾಮಸ್ವಾಮಿಯವರು ಮಹಾಮಂಗಳಾರತಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಹ ಅರ್ಚಕ ಭಾರ್ಗವ, ಸಮಿತಿಯ ಸದಸ್ಯರು, ನೂರಾರು ಭಕ್ತಾದಿಗಳು ಹಾಜರಿದ್ದು ದೇವಿಯ ಅಲಂಕಾರವನ್ನು ಕಣ್ತುಂಬಿಕೊಂಡರು.
