ಸಕಲೇಶಪುರ : ಹೆತ್ತೂರು ಹೋಬಳಿ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಣಗೂರಿನಿಂದ ಸುಬ್ರಮಣ್ಯಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ 22 ಪ್ರಯಾಣಿಕರಿದ್ದ ಮಿನಿ ಬಸ್ ಬಿಸಿಲೆ ಘಾಟ್ ರಸ್ತೆ ಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿ ಪಲ್ಟಿ ಆಗಿ ಸುಮಾರು ಇಪ್ಪತ್ತು ಜನರಿಗೆ ಗಾಯ ಆಗಿತ್ತು ನಾಲ್ಕು ಜನರಿಗೆ ಗಂಭೀರ ಗಾಯ ವಾಗಿತ್ತು

ಇದರಲ್ಲಿ ವನಗೂರು ಎಸ್ಟೇಟ್ ನ ಶಿವರಾಜ್ ಎಂಬುವರು ಮರಣ ಹೊಂದಿದ್ದರುಇವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಅವರಿಗೆ ಬರಬೇಕಾದಂತಹ ಪರಿಹಾರವನ್ನ ಒದಗಿಸಿಕೊಡುವುದಾಗಿ ತಿಳಿಸಿದರು

ನಂತರ ಅದೇ ಗ್ರಾಮದಲ್ಲಿ ಹಲವಾರು ಜನರಿಗೆ ಗಾಯಗಳಾಗಿದ್ದು ಅವರುಗಳ ಮನೆಗೆ ಭೇಟಿ ಮಾಡಿ ಗಾಯಾಳುಗಳನ್ನ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ್. ಗೊದ್ದು ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೌಸಿಕ್, ನಿರ್ದೇಶಕರಾದ ವಿ, ಎಂ ವಸಂತ್ ಕುಮಾರ್, ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದಮಲ್ಲೇಶ್ ಕಿಕ್ಕಳ್ಳಿ, ಸತೀಶ್ ಎಚ್. ಪಿ.ವನಗೂರು ಗ್ರಾಮ ಪಂಚಾಯತಿ ಸದಸ್ಯರಾದ ಹೇಮಂತ್ ಕುಮಾರ್ (ಸುಧೀರ್) ಮತ್ತು ಜೆಡಿಎಸ್ ಮುಖಂಡರಾದ ಸುಮನ್ ಹೆತ್ತೂರು, ನಾಗಣ್ಣ ಈ ಭಾಗದ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಗ್ರಾಮಸ್ಥರು ಇದ್ದರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *