ಸಕಲೇಶಪುರ: ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ ವಾರಸಾ ರೀತ್ಯಾ ಮಾಲೀಕತ್ವವು ಮೃತರ ಉತ್ತಾರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ, ಅಂತಹ ಜಮೀನುಗಳ ಚೌತಿ/ ವಾರಸಾ ಸ್ವರೂಪದ ಪ್ರಕ್ರಿಯೆಗಳನ್ನು ಸರಳಿಕೃತಗೊಳಿಸುವ ಉದ್ದೇಶದಿಂದಾಗಿ ಕರ್ನಾಟಕ ಸರ್ಕಾರದಿಂದ ಈ-ಪೌತಿ ಖಾತಾ ಅಂದೋಲನವನ್ನು ಹಮ್ಮಿಕೊಳ್ಳಲಾಗಿರುತ್ತದೆ

ಈ ಸಂಬಂಧ ಸಕಲೇಶಪುರ ತಾಲ್ಲೂಕು ವ್ಯಾಪ್ತಿಯಲ್ಲಿ ನವೆಂಬರ್ ಮಾಹೆಯ ಪೂ ರ್ತಿ ಪೌತಿ ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಮರಣ ಹೊಂದಿರುವ ಖಾತೆದಾರರ ಕುಟುಂಬಸ್ಥರು ಇ-ಪೌತಿ ಖಾತಾ ಬದಲಾವಣೆಗೆ ತಮ್ಮ ಹೋಬಳಿ ನಾಡಕಛೇರಿಯಲ್ಲಿ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿಯನ್ನು ತಕ್ಷಣವೇ ಸಲ್ಲಿಸಿ ಹಕ್ಕು ಬದಲಾವಣೆ ಮಾಡಿಕೊಳ್ಳುವಂತೆ ತಹಸಿಲ್ದಾರ್ ಸುಪ್ರೀತಾ ತಿಳಿಸಿದ್ದಾರೆ.

ಅರ್ಜಿಗಳ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು:ಪ್ರಸ್ತುತ ಸಾಲಿನ ಪಹಣಿ ಪತ್ರಿಕೆವಂಶವೃಕ್ಷ. ಮೃತರ ಮರಣ ಪ್ರಮಾಣ ಪತ್ರ ಮತ್ತು ಎಲ್ಲಾ ವಾರಸುದಾರರ ಆಧಾರ್ ಕಾರ್ಡ್. ಕಡ್ಡಾಯವಾಗಿ ಲಗತ್ತಿಸುವಂತೆ ಕೋರಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *