ಹಾಸನ : ದಿನಾಂಕ 8-11-2025 ರಂದು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಹಾಗೂ ಮಹಿಳೆ ಯರಿಗೆ ಆರೋಗ್ಯ ತಪಾಸಣಾ ಶಿಭಿರವನ್ನು ದಿನಾಂಕ 8-11-2025 ರಂದು ಬೆಳಗ್ಗೆ 10-00 ಘಂಟೇಯಿಂದ ಸಂಜೆ 4-00ಘಂಟೆಯವರೆಗೆ ಹಾಸನ ನಗರದ ಶ್ರೀ ಪುಷ್ಪಗೀರಿ ಆರೋಗ್ಯ ವಿಜ್ಞಾನ ಸಂಸ್ಥೆ ಹೊಸಲ್ಯೆನ್ ರಸ್ತೆ ಸಂಗಮೇಶ್ವರ ಬಡಾವಣೆ ಹತ್ತೀರ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹೀಳಾ ಘಟಕ, ಜಿಲ್ಲಾ ಮಹೀಳಾ ಘಟಕ, ಹಾಗೂ ರೋಟರಿ ಕ್ಲಬ್ ಅಫ್ ಹಾಸನ ಮಿಡ್ ಟೌನ್ ಇವರ ಸಹಬಾಗಿತ್ವದಲ್ಲಿ ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ 10 -00 ಘಂಟೆಗೆ ಅರೋಗ್ಯ ತಪಾಸಣೆ ಶಿಭಿರವನ್ನು ಶ್ರೀ ಪುಷ್ಪಗೀರಿ ಸಂಸ್ಥಾನದ ಮಠಾಧೀಶರಾದ ಶ್ರೀ ಸೋಮಶೇಖರ್ ಶಿವಾಚಾರ್ಯ ಸ್ವಾಮಿಜಿ ಉದ್ಘಾಟನೆ ಮಾಡುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ವಹಿಸುವರು.

ಪ್ರಸ್ಥಾವಿಕ ನುಡಿಯನ್ನು ಮಮತಾ ಪಾಟೀಲ್ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹೀಳಾ ಘಟಕ, ನೆರವೇರುಸುವರು. ಮುಖ್ಯ ಅಥೀತಿಗಳಾಗಿ ಡಾ ರಂಗಲಕ್ಷಮಿ ಲಕ್ಷ್ಮೀ ನರಸಿಂಗ್ ಹೋಮ್ ಹಾಸನ, ಡಾ ಸೌಮ್ಯ ಮಣಿ ನಿರ್ಧೇಶಕರು ಮಣಿ ಸೂಪರ್ ಸ್ಪೆಷಲಿಟಿ ಅಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ. ನವಿಲೆ ಪರಮೇಶ್ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಘಟಕ, ಹೆಚ್.ಸಿದ್ದೇಶ್ವರ ಅಧ್ಯಕ್ಷರು ರೋಟರಿ ಕ್ಲಬ್ ಹಾಸನ ಮಿಡ್ ಟೌನ್ ಡಾ ತೇಜಸ್ವಿ ಹೆಚ್ ಜೆ, ನಿಕಟಪೂರ್ವ ಅಧ್ಯಕ್ಷರು ರೋಟರಿ ಕಲ್ಬ್ ಹಾಸನ ಮೀಡ್ ಟೌನ್, ಚಂದ್ರಮತಿ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾಘಟಕ, ಧನಲಕ್ಷ್ಮೀ ಪ್ರದಾನ ಕಾರ್ಯದರ್ಶಿ ಅಖಿಲ ಭಾರತ ವೀರಶ್ಯೇವ ಲಿಂಗಾಯತ ಭಹಾಸಭಾ ಮಹಿಳಾ ಘಟಕ ಹಾಸನ. ಇವರು ಭಾಗವಹಿಸುವರು.

ಮಹಿಳೆಯರಿಗೆ ಸಾಮಾನ್ಯ ರೋಗದ ತಪಾಸಣೆ. ಹಾಗೂ ನರಿತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಿಂದ ಸ್ಥನ ಮತ್ತು ಗರ್ಭಕಂಟ ಸಮಾಲೋಚನೆ ಹಾಗೂ ಪರಿಕ್ಷೆ ನಡೆಸಲಾಗೂವುದು ಬಿ. ಪಿ. ಹಾಗೂ ಸಕ್ಕರೆ ಕಾಯಿಲೆ ಹಾಗೂ ಇತಥಳರೆ ಕಾಯಿಲೆಗಳ ತಪಾಸಣೆ ನಡೆಯುವುದು ಈ ಆರೋಗ್ಯ ಶಿಭಿರದ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಲು ಕೋರಲಾಗಿದೆ.ಮಮತಾ ಪಾಟೀಲ್ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಘಟಕ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *