
ಸಕಲೇಶಪುರ : ತಾಲ್ಲೂಕು ವಳಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕರಡಿಗಾಲ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆ ಮತ್ತು ಉಚಿತ ಪಶು ಚಿಕಿತ್ಸಾ ಶಿಬಿರವನ್ನು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿದರು.
ಅತಿಹೆಚ್ಚು ಹಾಲು ಕರೆದವರಿಗೆ ಹಾಲಿನ ಕ್ಯಾನ್ ಗಳನ್ನು ವಿತರಿಸಿದರು.ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆಯ ಪಾತ್ರ ಬಹಳ ಮಹತ್ವದ್ದಾಗಿದ್ದು, ದೇಶದ ಆರ್ಥಿಕತೆಗೆ ಹೈನುಗಾರಿಕೆಯು ಒಂದು ಭಾಗವಾಗಿದೆ.ಗೋರಕ್ಷಣೆಯಲ್ಲಿ ನಾವೆಲ್ಲರು ಪಾಲ್ಗೊಂಡು ಗೋವುಗಳನ್ನು ಉಳಿಸಲು ಹೋರಾಡಬೇಕು.ರೈತರು ಹಸುಗಳನ್ನು ಖರೀದಿಸುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಶುಪಾಲಕ ಸಹಾಯಕ ಕಾರ್ಯಪಾಲಕರು ಮತ್ತು ಆಸ್ಪತ್ರೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







