ಸಕಲೇಶಪುರ ತಾಲೂಕು ಜಮ್ಮನಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕರಾದ ಹರೀಶ್ ರೈ ಹಾಗೂ ಮಂಜುಳಾ ದಂಪತಿಯ ಸುಪುತ್ರಿ ದಿಶಾ ಹೆಚ್ ರೈ ಅವರುಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಪ್ರಸಕ್ತ ಸಾಲಿನ Msc ಗಣಿತದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರನ್ನು ಸಕಲೇಶಪುರದ ಮಾನ್ಯ ಶಾಸಕರಾದ ಸಿಮೆಂಟ್ ಮಂಜುನಾಥ್.ಕರ್ನಾಟಕ ಸರ್ಕಾರದ ಸಕಲೇಶಪುರ ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮುರಳಿ ಮೋಹನ್.ಬೆಳಗೋಡು ಹೋಬಳಿ ಬೆಳೆಗಾರರ ಸಂಘ.ಕನ್ನಡ ಸಾಹಿತ್ಯ ಪರಿಷತ್ ಬೆಳಗೋಡು ಹೋಬಳಿ, ಹಾಸನ ಜಿಲ್ಲಾ ಬಂಟರ ಸಂಘ,ಹಾಗೂ ಕುನಿಗನಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

ಈ ವಿದ್ಯಾರ್ಥಿನಿಯ ಸಾಧನೆಯನ್ನು ಪ್ರತಿಯೊಬ್ಬರೂ ಸ್ಮರಿಸಿ,,,ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *